Mankutimmana Kagga by D.V. Gundappa
ಕಟ್ಟಡದ ಪರಿಯನಿಟ್ಟಿಗೆಯೆಂತು ಕಂಡೀತು? । ಗಟ್ಟಿ ನಿಲದದು ಬೀಳೆ ಗೋಡೆ ಬಿರಿಯುವುದು ॥ ಸೃಷ್ಟಿ ಕೋಟೆಯಲಿ ನೀನೊಂದಿಟಿಕೆ; ಸೊಟ್ಟಾಗೆ । ಪೆಟ್ಟು ತಿನ್ನುವೆ ಜೋಕೆ - ಮಂಕುತಿಮ್ಮ ॥ ೫೩೨ ॥
kaTTaDada pariyanu iTTigeyu entu kaNDItu? । gaTTi niladadu bILe gODe biriyuvudu ॥ sRuShTi kOTeyali nInu ondu iTike; soTTAge । peTTu tinnuve jOke - Mankutimma ॥ 532 ॥
ಇಟ್ಟಿಗೆಗಳಿಂದ ಕಟ್ಟಲ್ಪಡುವುದು ಕಟ್ಟಡ. ಆದರೆ ಆ ಕಟ್ಟಡ ಹೇಗಿರುವುದೆಂದು ಆ ಇಟ್ಟಿಗೆ ಅರಿಯಲು ಸಾಧ್ಯವಿಲ್ಲ. ಆ ಇಟ್ಟಿಗೆ ಗಟ್ಟಿಯಾಗಿ ನಿಲ್ಲದೆ ಇದ್ದರೆ ಅದರಿಂದ ಕಟ್ಟಿದ ಗೋಡೆ ಬಿರುಕುಬಿಡುವುದು. ಹಾಗೆಯೇ ಈ ಜಗತ್ತಿನ ಕಟ್ಟಡದಲ್ಲಿ ನಾವೂ ಒಂದು ಇಟ್ಟಿಗೆ ಮಾತ್ರ. ನಾವು ಸ್ಥಿರವಾಗಿರದಿದ್ದರೆ, ಪೆಟ್ಟು ತಿಂದು ಸರಿಯಾಗಬೇಕಾಗುವುದು, ಜೋಕೆ ಎಂದು ಒಂದು ಎಚ್ಚರಿಕೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
How can the brick know about the structure of the building? But if it does not stand firm, the wall cracks and the building fails. So, the mason makes sure that every brick is laid out just the way it should. However once in a while a lone brick will stick out. The mason will either hit it back into the wall or chop it off. In the fort of this creation, each man is a mere brick. If you do anything that does not fit in the grand scheme, be prepared to be whacked. - Mankutimma
Video Coming Soon
Detailed video explanations by scholars and experts will be available soon.