Mankutimmana Kagga by D.V. Gundappa
ಶಶ್ವದ್ವಿಕಾಸನ ಹ್ರಾಸವ ಕ್ರಮಗಳಿಂ । ವಿಶ್ವದಲಿ ನರ್ತಿಸುತೆ ಪೌರುಷೊನ್ನತಿಯೊಳ್ ॥ ಸ್ವಸ್ವರೂಪವನರಸುವಾಟ ಪರಚೇತನದ । ಹೃಷ್ಯದ್ವಿಲಾಸವೆಲೊ - ಮಂಕುತಿಮ್ಮ ॥ ೫೩೧ ॥
shashvat vikAsana hrAsana kramagaLim । vishvadali nartisute pauruShOnnatiyoL ॥ svasvarUpavanu arasuva ATa parachEtanada । hRuShyat vilAsavelo - Mankutimma ॥ 531 ॥
ಶಾಶ್ವತವಾದ ಆ ಪರಮ ಪೌರುಷ(ಶಕ್ತಿ)ವೊಂದು ವಿಕಸನ ಮತ್ತು ಹ್ರಾಸನ ಕ್ರಮಗಳಿಂದ ತನ್ನನ್ನೇ ತಾನು ಹುಡುಕುವ ಆಟವನ್ನು ಆಡುತ್ತಾ ಜಗನ್ನಾಟಕದಲ್ಲಿ ಹರ್ಷ ಮತ್ತು ವಿಲಾಸದಿಂದ ಮಗ್ನವಾಗಿದೆ ಎನ್ನುವ ತತ್ವವನ್ನು ಈ ಮುಕ್ತಕದಲ್ಲಿ ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The Cosmic Spirit is a permanent being. But it expands and contracts as the universe. In doing so, it dances happily along side human progress. It gets itself lost in it and plays the game of finding itself (via realization). It is very happy in playing this game for ever. - Mankutimma
Video Coming Soon
Detailed video explanations by scholars and experts will be available soon.