Back to List

Kagga 528 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಭಕ್ತಿ ನಂಬುಗೆ ಸುಲಭ, ಭಜನೆ ವಂದನೆ ಸುಲಭ । ತತ್ತ್ವ ಶೋಧನೆ ಕಷ್ಟ; ಮತಿಕಾರ್ಯ ಕಷ್ಟ ॥ ಸುತ್ತುವುದು ಗಿರಿಸುತ್ತ ಸುಳುವೆಂದು ಲೋಕಜನ । ಹತ್ತುವನು ತಾಪಸಿಯೊ - ಮಂಕುತಿಮ್ಮ ॥ ೫೨೮ ॥

bhakti nambuge sulabha, bhajane vandane sulabha । tattva shOdhane kaShTa, matikArya kaShTa ॥ suttuvudu girisutta suLuvendu lOkajana । hattuvanu tApasiyo - Mankutimma ॥ 528 ॥

Meaning in Kannada

ಭಕ್ತಿ, ಭಜನೆ, ಧ್ಯಾನಗಳನ್ನು ಮಾಡುವುದು ಸುಲಭದ ಕೆಲಸ. ಆದರೆ ಪರತತ್ವವನ್ನು ಹುಡುಕುವುದು ಮತ್ತು ಆ ಹುಡುಕುವುದಕ್ಕಾಗಿ ನಡೆಸುವ ಬುದ್ಧಿಯ ಕಾರ್ಯ ಇನ್ನೂ ಕಷ್ಟತರವಾದದ್ದು. ಸುಲಭವೆಂದು ಬೆಟ್ಟವನ್ನು ಸುತ್ತುತ್ತಾರೆ ಲೋಕದ ಜನ. ಆದರೆ ಹತ್ತಿ ಸಾಧಿಸುವವನೇ ತಾಪಸಿ ಎಂದು ಭಕ್ತಿ ಮಾರ್ಗವನ್ನು ಮತ್ತು ಪರತತ್ವವನ್ನು ಅರಿಯುವ ಮಾರ್ಗವನ್ನು ವಿಶ್ಲೇಷಣೆ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

It is easy to believe. It is easy to chant the God's name. It is difficult to understand the concept of God though. It is difficult to think and imagine him. While the general population go round and round a hill looking for clues, only the steadfast climb it to seek God. - Mankutimma

Themes

DevotionWisdom

Video Section

Video Coming Soon

Detailed video explanations by scholars and experts will be available soon.