Mankutimmana Kagga by D.V. Gundappa
ಜೀವಕಾರಣಮೂಲ ಗೂಢವಾಗಿರ್ದೊಡಂ । ಧೀವಿಕಾಸದ ಬೆಳಕನಾದನಿತು ಗಳಿಸಿ ॥ ಕೈವಲ್ಯಪಥವನರಸುತ ಯಾತ್ರಿಸಲೆಬೇಕು । ದೀವಿಗೆಯು ಮತಿಯೊಂದೆ - ಮಂಕುತಿಮ್ಮ ॥ ೫೨೭ ॥
jIva kAraNa mUla gUDhavAgirdoDam । dhIvikAsada beLakanu Adanitu gaLisi ॥ kaivalya pathavanu arasuta yAtrisale bEku । dIvigeyu matiyonde - Mankutimma ॥ 527 ॥
ಈ ಜಗತ್ತಿನ ಮೂಲ ಕಾರಣವು ಗೂಢವಾಗಿರುವಾಗ, ಬುದ್ಧಿಯು ವೃದ್ಧಿಯಾಗುವಂತಹ ಜ್ಞಾನದ ಬೆಳಕನ್ನು ಪಡೆದು ಪಾರಮಾರ್ಥದ ತತ್ವವನ್ನು ಅರಸುವ ದಾರಿಯಲ್ಲಿ ಪ್ರಯಾಣಮಾಡಲೇಬೇಕು. ಕತ್ತಲಲ್ಲಿ ಬೆಳಕ ನೀಡುವ ದೀವಿಗೆ ಮತ್ತು ಜ್ಞಾನವನ್ನು ಅರಸುವ ಬುದ್ಧಿ ಎರಡೂ ಒಂದೇ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The source of life is mysterious and a divine secret. But we must strive to find it by enhancing our intellect as much as possible. We must find that path towards the realization. Our wisdom is the only light we have to do so. - Mankutimma [Translator's note: I think the stress is to find one's own light. It is not possible to know the secret, using other's light. You are free to light your lamp from the knowledgeable - But searching has to be done by you.
Video Coming Soon
Detailed video explanations by scholars and experts will be available soon.