Mankutimmana Kagga by D.V. Gundappa
ಸೆರೆಬಿದ್ದು ಧರ್ಮಪಾದಪ ನಿಲದು ಮತಗಳಲಿ । ಜರೆಯಿಂದ ಬರಡಹುದು ಮಠದ ನೆರಳಿನಲಿ ॥ ಪರಸತ್ತ್ವರಸ ವಿಶ್ವಜೀವನದ ಬೇರ್ಗಳಿಂ । ನೆರೆಯಲಾ ತರು ಸೊಂಪು - ಮಂಕುತಿಮ್ಮ ॥ ೫೨೬ ॥
serebiddu dharma pAdapa niladu matagaLali । jareyinda baraDahudu maThada neraLinali ॥ parasattva rasa vishvajIvanada bErgaLim । nereyalA taru soMpu - Mankutimma ॥ 526 ॥
ಧರ್ಮವೆಂಬ ಮರ ಭಿನ್ನ ಭಿನ್ನ ಮತಗಳ ಆಧಾರದಮೇಲೆ ನಿಲ್ಲುವುದಿಲ್ಲ. ಮಠಗಳ ಮತ್ತು ಅವುಗಳು ಪ್ರತಿಪಾದಿಸುವ ಮತಗಳ ನೆರಳಿನಲ್ಲಿದ್ದರೆ, ಧರ್ಮ ಸೊರಗುತ್ತದೆ. ಜನ ಜೀವನದ ಬದುಕಿನಲಿ ಸಂಸ್ಕೃತಿ ಮತ್ತು ಸಂಸ್ಕಾರಗಳ ಬೇರುಗಳಲ್ಲಿ ಪರತತ್ವದ, ಪರಮಾತ್ಮನ, ತತ್ವ ಮತ್ತು ಸತ್ವಗಳು ಆಳವಾಗಿ ಇಳಿದಲ್ಲಿ ಈ ಧರ್ಮವೆಂಬ ವೃಕ್ಷ ಮತ್ತೆ ಸಮೃದ್ಧಿಯಾಗಿ ಬೆಳೆದು ಸೊಂಪಾಗುತ್ತದೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The tree of Dharma (the moral code of life) will not stay hostage to any one sect. It does get weak if it takes shelter in any one of the sect's temples. Only when it accept freshness from the cosmic spirit through the roots of everyday life of the world (by not limiting itself to the temple) will the tree look prosperous. - Mankutimma
Video Coming Soon
Detailed video explanations by scholars and experts will be available soon.