Back to List

Kagga 525 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜಗ ಬೆಲೆದು ಚಿಗುರುತಿರೆ ಶಾಸ್ತ್ರ ಕರಟರಲಹುದೆ? । ನಿಗಮಸಂತತಿಗೆ ಸಂತತಿಯಾಗದಿಹುದೆ? ॥ ಬಗೆಬಗೆಯ ಜೀವಸತ್ತ್ವವಿಕಾಸವಾಗುತಿರ- । ಲೊಗೆವುದೈ ವಿಜ್ಞಾನ - ಮಂಕುತಿಮ್ಮ ॥ ೫೨೫ ॥

jaga beLedu chigurutire shAstra karaTiralahude? । nigamasantatige santatiyAgadihude? ॥ bage bageya jIva sattva vikAsavAgutiral । ogevudai vijnAna - Mankutimma ॥ 525 ॥

Meaning in Kannada

ಜಗತ್ತೆಲ್ಲ ಬೆಳೆದು ಹೊಸ ವಿಚಾರಗಳು ಚಿಗುರುತ್ತಿರುವಾಗ ಅದಕ್ಕೆ ಪೂರಕವಾದ ಶಾಸ್ತ್ರವು ಸುರುಟಿಕೊಂಡಿರಲು ಸಾಧ್ಯವೇ? ಜ್ಞಾನದ ಆಯಾಮಗಳೂ ಸಹ ಹೊಸ ಹೊಸ ವಿಚಾಗಳ ನೆಲೆಯಾಗಬೇಕು. ಎಲ್ಲೆಡೆಯಲ್ಲಿಯೂ ಹೊಸತಿನ ವಿಕಾಸವಾಗುತ್ತಿರಬೇಕಾದರೆ ಜ್ಞಾನವೂ ವಿಕಾಸಗೊಳ್ಳಬೇಕು ಮತ್ತು ಹಾಗೆ ವಿಕಾಸಗೊಂಡದ್ದರಿಂದ ವಿಜ್ಞಾನದ ಹೊಸ ಹೊಸ ವಿಚಾರಗಳು ಬೆಳಕಿಗೆ ಬರಬೇಕು ಎಂದು ಜಗತ್ತಿನ ನಿರಂತರ ನವೀನತೆಯ ವಿಚಾರವನ್ನು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

When the world is growing, the scriptures will also grow. Scriptures are considered to be created by God (The universal truth). Those scriptures will beget more others which will interpret and elaborate on the basic truth. As we find a variety of beings, so will be the scriptures. That is how science (one of the modern scriptures) is born. - Mankutimma

Themes

DevotionWisdomLifeSociety

Video Section

Video Coming Soon

Detailed video explanations by scholars and experts will be available soon.