Mankutimmana Kagga by D.V. Gundappa
ಪಿರಿದೆಲ್ಲ ಮತನೀತಿಗಳಿಗಿಂತ ಜೀವಿತವು । ನೆರೆಬಂದ ನದಿ ದಡಕೆ ಬಾಗಿ ಪರಿಯುವುದೇಂ? ॥ ಧರುಮಸೂಕ್ಷ್ಮದ ತಿಳಿವೆ ಲೋಕಸೂತ್ರದ ಸುಳಿವು । ಅರಸು ಜೀವಿತ ಹಿತವ - ಮಂಕುತಿಮ್ಮ ॥ ೫೨೪ ॥
piridella matanItigaLiginta jIvitavu । nerebanda nadi daDake bAgi pariyuvudEm? ॥ dharumasUkShmada tiLive lOkasUtrada suLivu । arasu jIvita hitava - Mankutimma ॥ 524 ॥
ಬದುಕು ಬದುಕಿನ ಎಲ್ಲ ಸೂತ್ರಗಳಿಗಿಂತ ಹಿರಿಯದು. ಉಕ್ಕಿ ಪ್ರವಾಹವಾಗಿ ಹರಿಯುವ ನದಿ, ದಡಕ್ಕೆ ನಮಸ್ಕರಿಸುತ್ತದೇನು? ಧರ್ಮ ಸೂಕ್ಷ್ಮಗಳೆಲ್ಲ ಬದುಕಿನ ಸೂತ್ರಗಳನ್ನು ನಮಗೆ ಅರಿವಾಗಿಸಬೇಕು ಹಾಗಾಗಿ ನೀನು ಅವುಗಳನ್ನೆಲ್ಲ ಮೀರಿ ಬದುಕಿನ ಹಿತವನ್ನು ಹುಡುಕು ಎಂದು ಒಂದು ಜ್ಞಾನದ ಸುಳಿವು ಮತ್ತು ಒಂದು ಆದೇಶ ಎರಡನ್ನೂ ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
To be alive is the strongest yardstick to measure our actions against. It trumps all other measure like religion and morality. Does a river having floods try to contain itself with in the banks (and attempt not to hurt the ones living on the banks)? Every situation calls for re-evaluation of our previously held standards of morality. The real code to live by is thus elusive and always changing. We should always be in search of that balance. - Mankutimma
Video Coming Soon
Detailed video explanations by scholars and experts will be available soon.