Mankutimmana Kagga by D.V. Gundappa
ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ । ಹಾದಿ ತೋರಲು ನಿಶಿಯೊಳುರಿವ ಪಂಜುಗಳು ॥ ಸೌಧವೇರಿದವಂಗೆ, ನಭವ ಸೇರಿದವಂಗೆ । ಬೀದಿಬೆಳಕಿಂದೇನೊ? - ಮಂಕುತಿಮ್ಮ ॥ ೫೨೩ ॥
vEdagaLu shAstragaLu lOkanItigaLella । hAdi tOralu nishiyoLu uriva panjugaLu ॥ soudhavEridavange, nabhava sEridavange । bIdi beLakindEno? - Mankutimma ॥ 523 ॥
ಕತ್ತಲಲ್ಲಿ ನಮಗೆ ಬೆಳಕ ತೋರುವ ಪಂಜುಗಳಂತೆ ಅಜ್ಞಾನದಲ್ಲಿರುವವಗೆ ವೇದದ ಮತ್ತು ಶಾಸ್ತ್ರಗಳ ಜ್ಞಾನ ವಿಜ್ಞಾನಗಳು ದೀಪಗಳಂತೆ. ಒಂದು ಲಾಟೀನಿನ ಬೆಳಕಿನಲ್ಲಿ ಹಾದಿಯನ್ನು ಸವೆಸಿ,ದೀಪಗಳ ಬೆಳಕಿನಿಂದ ಪ್ರಾಜ್ವಲ್ಯಮಾನವಾದ ಮನೆಯನ್ನೋ, ಸೌಧವನ್ನೋ ಹೊಕ್ಕವನಿಗೆ ಆ ಲಾಟೀನಿನ ಬೆಳಕಿನ ಅವಶ್ಯಕತೆಯಿರುವುದಿಲ್ಲ ಎಂದು ಅಜ್ಞಾನದಿಂದ ಜ್ಞಾನದೆಡೆಗೆ ಹೋಗುವ ಮಾರ್ಗವನ್ನು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
The Vedas, various scriptures and doctrines on morality are all the road-side lamps to help us see the right path in the darkness. What good are these street lights for a person who is already elevated to a higher level of consciousness or attained nirvana (ultimate realization)? - Mankutimma
Video Coming Soon
Detailed video explanations by scholars and experts will be available soon.