Back to List

Kagga 522 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೊಸ ಚಿಗುರು ಹಳೆ ಬೇರು ಕೂಡಿರಲು ಮರಸೊಬಗು । ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ ॥ ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ । ಜಸವು ಜನಜೀವನಕೆ - ಮಂಕುತಿಮ್ಮ ॥ ೫೨೨ ॥

hosa chiguru haLe bEru kUDiralu marasobagu । hosayukti haLetattvada oDagUDe dharma ॥ RuShivAkyada oDane vijnAna kale mELavise । jasavu janajIvanake - Mankutimma ॥ 522 ॥

Meaning in Kannada

ಮಾನ್ಯ ಗುಂಡಪ್ಪನವರ ಈ ಮುಕ್ತಕ ಬಹಳ ಪ್ರಖ್ಯಾತವಾದ ಮತ್ತು ಹೆಚ್ಚು ಪ್ರಚಾರವನ್ನು ಪಡೆದ ಮುಕ್ತಕಗಳಲ್ಲಿ ಒಂದು. ಒಂದು ಮರದ ಬೇರುಗಳು ಹಳೆಯದಾಗಿದ್ದು ಮತ್ತು ಆಳವಾಗಿದ್ದರೆ ಆ ಮರದಲ್ಲಿ ಮೊಳೆಯುವ ಹೊಸ ಚಿಗುರು ಬಹಳ ಸೊಗಸು. ಹಾಗೆಯೇ ನಮ್ಮ ಹಳೆಯ ತತ್ವದ ಸತ್ವವನ್ನು ಉಳಿಸಿಕೊಂಡು ಹೊಸ ಯುಕ್ತಿಯಿಂದ ಕೂಡಿ ಪಾಲಿಸುವ ಧರ್ಮವಾಗಬೇಕು. ಪುರಾತನ ಋಷಿಗಳ ಜ್ಞಾನದ ವಾಕ್ಯಗಳೊಡನೆ ನವೀನ ವಿಜ್ಞಾನವು ಸಮನ್ವಯಗೊಂಡರೆ, ಅಂತಹ ಒಂದು ಸ್ಥಿತಿ ಜನರ ಜೀವನಕೆ ನಿಜವಾದ ಸಂತಸವನ್ನು ತರುತ್ತದೆ ಎಂದು ಬದುಕಿನ ಅದ್ಭುತ ಸತ್ಯವನ್ನು ಪ್ರತಿಪಾದಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

A tree is most healthy and beautiful when it has old roots and fresh sprouts. Just like that, it is Dharma only when new wisdom is in harmony with ancient philosophy. When the words of sages are reverberated in acts of science and art, there is bound to be prosperity to all. - Mankutimma

Themes

WisdomMoralityNaturePeace

Video Section

Video Coming Soon

Detailed video explanations by scholars and experts will be available soon.