Mankutimmana Kagga by D.V. Gundappa
ವೇದ ಲೋಕಾಚಾರ ನಿನ್ನನುಭವದ ಯುಕ್ತಿ । ಶೋಧಿಸೀ ಮೂರನುಂ ಸಂವಾದಗೊಳಿಸು ॥ ಸಾಧಿಜ್ಞಾನ ನರಸಾಧ್ಯ ಪ್ರಮಾಣವದು । ಹಾದಿ ಬೆಳಕದು ನಿನಗೆ - ಮಂಕುತಿಮ್ಮ ॥ ೫೨೧ ॥
vEda lOkAchAra ninna anubhavada yukti । shOdhisi ee mUranum samvAdagoLisu ॥ sAdhi jnAna narasAdhya pramANavadu । hAdi beLakadu ninage - Mankutimma ॥ 521 ॥
ಅನಾದಿ ಕಾಲದಿಂದಲೂ ಹರಿದು ಬಂದಿರುವ ವೇದಜ್ಞಾನದ ಸಾರ, ಲೋಕಾರೂಢಿಯಲ್ಲಿ ನಮಗೆ ಲಭ್ಯವಾದ ಜ್ಞಾನ ಮತ್ತು ನಾವು ನಮ್ಮ ಅಂತರಂಗದಲ್ಲಿ ಮಥಿಸಿ ಅರಿತು ಪಡೆದುಕೊಂಡ ಅರಿವು, ಈ ಮೂರನ್ನು ಸಮನ್ವಯಗೊಳಿಸಿದ್ದಲ್ಲಿ, ಅದು ಸಾಧಿಸಿದ ಜ್ಞಾನವಾಗಿ ರೂಪುಗೊಳ್ಳುತ್ತದೆ. ನರನ ಸಾಧನೆಗೆ ಮತ್ತು ಅಂತಹ ಸಾಧಿತ ಜ್ಞಾನವೇ ನಮ್ಮ ಬದುಕಿಗೆ ಬೆಳಕಾಗುತ್ತದೆ ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
The ancient knowledge of the Vedas, the current traditions of the world and wisdom you accumulated based on your experiences. These have to be thought over and over again. They have to be tallied with each other. When we go through such exercise, a new philosophy emerges that is very personal to each one. That should be treated as the yardstick for all decisions. That shall light your path going forward. - Mankutimma
Video Coming Soon
Detailed video explanations by scholars and experts will be available soon.