Mankutimmana Kagga by D.V. Gundappa
ತಿಳಿವಾವುದಿಳೆಗೆ ಯುಗಯುಗದ ಬೆಳಕಾಗಿತ್ತೊ । ಹಳದೆಂದು ನೀನದನು ಕಳೆಯುವೆಯ, ಮರುಳೆ ॥ ತಳಹದಿಯದಲ್ತೆ ನಮ್ಮೆಲ್ಲ ಹೊಸ ತಿಳಿವಿಂಗೆ? । ಹಳೆ ಬೇರು ಹೊಸ ತಳಿರು - ಮಂಕುತಿಮ್ಮ ॥ ೫೨೦ ॥
tiLivu Avudu iLege yuga yugada beLakAgitto । haLadendu nInadanu kaLeyuveya, maruLe ॥ taLahadiyadalte nammella hosa tiLivinge? । haLe bEru hosa taLiru - Mankutimma ॥ 520 ॥
ಈ ಜಗತ್ತಿನಲ್ಲಿ ನಮ್ಮ ಸನಾತನದ ವೇದದ ಜ್ಞಾನವೇ ಅತೀ ಪುರಾತನವಾದದ್ದು. ಅದು ಅನಾದಿ ಕಾಲದಿಂದ ಯುಗ ಯುಗಗಳಿಂದ ಜನಮಾನಸದೊಳಕ್ಕೆ ಹರಿದು ಬರುತ್ತಿದೆ. ಅದನ್ನು ಹಳತು ಎಂದು ನೀನು ಹೇಳುತ್ತೀಯಾ ಹುಚ್ಚಾ? ಅದೇ ಅಲ್ಲವೇ ನಮ್ಮ ಜಗತ್ತಿನ ಸಮಸ್ತ ಆಧುನಿಕ ಜ್ಞಾನದ ಉಗಮಕ್ಕೆ ತಳಹದಿ ಅಥವಾ ಅಡಿಪಾಯ. ಹಳೆಯಬೇರು ಆಳವಾಗಿ ನೆಲದಲ್ಲಿರುವಾಗ ಮಾತ್ರ ಹೊಸ ಚಿಗುರು ಪ್ರತೀ ವಸಂತಕ್ಕೂ ನಳನಳಿಸುವುದು ಎಂದು ನಮ್ಮ ಬದುಕಿನ, ಸಂಸ್ಕಾರ, ಸಂಸ್ಕೃತಿಗಳ ಮತ್ತು ಜ್ಞಾನದ ಬೇರನ್ನು ನಮಗೆ ನೆನಪಿಸುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.
From time immemorial, this world is enlightened by the ancient knowledge (of Vedas). Will you discard them all just because they are old? You would be a fool to do so. It is the foundation of all our new understandings. That knowledge is enabling us to make modern-day-progress possible. Just like a tree is always beautiful only when the roots are old and sprouts are fresh. - Mankutimma
Video Coming Soon
Detailed video explanations by scholars and experts will be available soon.