Mankutimmana Kagga by D.V. Gundappa
ಪರದೈವವನು ತೊರೆಯೆ ಗತಿ ನರನಿಗಿಲ್ಲ ದಿಟ । ನರನಿಲ್ಲದಿರೆ ದೇವನನು ಕೇಳ್ವರಾರು? ॥ ಪುರುಷತೆಯೆ ಸೇತುವೆ ಮೃಗತ್ವದಿಂ ದಿವ್ಯತೆಗೆ । ಮುರಿಯದಿರು ಸೇತುವೆಯ - ಮಂಕುತಿಮ್ಮ ॥ ೫೨೯ ॥
paradaivavanu toreye gati naranigilla diTa । naranilladire dEvananu kELvarAru? ॥ puruShateye sEtuve mRugatvadim divyatege । muriyadiru sEtuveya - Mankutimma ॥ 529 ॥
ದೇವರನ್ನು ಬಿಟ್ಟು ಮನುಷ್ಯನಿಗೆ ಬೇರೆ ಗತಿಯೇ ಇಲ್ಲ. ಮನುಷ್ಯನಿಲ್ಲದಿದ್ದರೆ ಆ ದೇವರನ್ನು ಕೇಳುವವರು ಯಾರು? ಜಗತ್ತನ್ನು ಸರ್ವರೀತಿಯಲ್ಲೂ ಆವರಿಸಿಕೊಂಡಿರುವ ಆ ಪರಮ ಶಕ್ತಿಯೇ ಪಶುತ್ವಕ್ಕೂ ದೈವತ್ವಕ್ಕೂ ನಡುವೆ ಇರುವ ಸೇತುವೆ. ಆ ಸೇತುವೆಯನ್ನು ಮುರಿಯದೆ ಇರು ಎಂದು ಜಗತ್ತಿನಲ್ಲಿ ಮನುಷ್ಯನಿಗೂ ಮತ್ತು ಆ ದೇವರೆಂಬ ತತ್ವಕ್ಕೂ ಇರುವ ಸಂಬಂಧವನ್ನು ವಿವರಿಸುತ್ತಾ, ಈ ಸಂಬಂಧವನ್ನು ಮುರಿಯದಿರು ಎಂದು ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
It is true that Man does not have a future after abandoning God. But, if Man were not to be there, who will care for God? Being human is the bridge between being an animal and realizing God. Don't blow up the bridge. - Mankutimma
Video Coming Soon
Detailed video explanations by scholars and experts will be available soon.