Back to List

Kagga 517 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮನುಜಸಾಕಲ್ಯದನುಭವಕೆ ಮಿತಿಗೊತ್ತುಂಟೆ? । ದಿನದಿನವು ಕಡಲಲೆಗಳಂತೆ ಪರಿವುದದು ॥ ಅನುಮಿತಿಯ ನಿರ್ಧಾರವದರಿಂ ನಿರಾಧಾರ । ದನಿ ನೂರು ನರನೆದೆಗೆ - ಮಂಕುತಿಮ್ಮ ॥ ೫೧೭ ॥

manuja sAkalyada anubhavake miti gottunTe? । dinadinavu kaDala alegaLante parivudadu ॥ anumatiya nirdhAravu adarim nirAdhAra । dani nUru naranedege - Mankutimma ॥ 517 ॥

Meaning in Kannada

ಮನುಷ್ಯನ ಸಕಲ ಅನುಭವಗಳಿಗೆ ಒಂದು ಮಿತಿಯು ಉಂಟೆ? ಸಮುದ್ರದ ಮೇಲೆ ಏಳುವ ಅಲೆಗಳನ್ನು ಎಣಿಸಲಾಗುವುದೇ? ಹಾಗೆಯೇ ಪ್ರತಿನಿತ್ಯ ಮನುಷ್ಯನ ಹೃದಯದಲ್ಲಿ ಏಳುವ ಭಾವನೆಗಳನ್ನು ಎಣಿಸಲೂ ಆಗುವುದಿಲ್ಲ ಮತ್ತು ಅದರ ಉದ್ದ, ಆಳ, ಮತ್ತು ಎತ್ತರಗಳನ್ನು ಅಳೆಯಲೂ ಆಗುವುದಿಲ್ಲ. ಹಾಗೆ ಅಳೆದರೆ ಅದಕ್ಕೆ ಯಾವ ಆಧಾರವೂ ಇರುವುದಿಲ್ಲ ಏಕೆಂದರೆ ನೂರಾರು ಭಾವನೆಯ ದನಿಗಳು ನರನ ಹೃದಯಕ್ಕೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Can there be a limit to the number of different ways people (all humans) may experience God? New experiences will keep flowing just like the waves at sea. Hence having a set of rules or regulations for such experience is baseless. There are hundreds of voices in each man's hearts. - Mankutimma

Themes

DevotionLifeSocietyLove

Video Section

Video Coming Soon

Detailed video explanations by scholars and experts will be available soon.