Mankutimmana Kagga by D.V. Gundappa
ಅನುಭವದ ಪರಿ ನೂರ್ವರಿಗೆ ನೂರು ನೂರು ಪರಿ । ದಿನವೊಂದರೊಳೆ ಅದೊಬ್ಬಂಗೆ ನೂರು ಪರಿ ॥ ಎಣಿಪುದಾರನುಭವವನ್, ಆವ ಪ್ರಮಾಣದಲಿ । ಮಣಲ ಗೋಪುರವೊ ಅದು - ಮಂಕುತಿಮ್ಮ ॥ ೫೧೬ ॥
anubhavada pari nUrvarige nUru nUru pari । dinavondaroLe adu obbange nUru pari ॥ eNipudAr anubhavavan, Ava pramANadali । maNala gOpuravo adu - Mankutimma ॥ 516 ॥
ನಮಗೆ ಯಾವುದೇ ವಿಷಯದ ಅನುಭವ ಎಲ್ಲ ಕಾಲಕ್ಕೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಒಂದು ವಿಷಯ ನೂರು ಜನಕ್ಕೆ ನೂರು ರೀತಿಯ ಅನುಭವವನ್ನು ನೀಡಬಹುದು. ಹಾಗೆಯೇ ಒಂದೇ ವಿಷಯವು ಒಂದೇ ದಿನದಲ್ಲಿ ಒಬ್ಬನೇ ವ್ಯಕ್ತಿಗೆ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ರೀತಿಯ ಅನುಭವವನ್ನು ನೀಡಬಹುದು. ಹಾಗೆಯೇ ಪರಮಾತ್ಮಾನುಭವವೂ ಸಹ ಸದಾಕಾಲ ಒಂದೇ ರೀತಿಯಲ್ಲಿರುವುದಿಲ್ಲ ಮತ್ತು ಅವನನ್ನು ಕುರಿತಾದ ಭಾವನೆಗಳನ್ನುಎಣಿಸಲು ಸಾಧ್ಯವಿಲ್ಲ ಎಂದು ಹೇಳುತ್ತಾ, ಈ ಅನುಭವವು, ಎದ್ದು, ಬಿದ್ದು ಮತ್ತೆ ಬೇರೆಯೇ ರೂಪ ಪಡೆದು ನಿಲ್ಲುವಂತೆ ಮತ್ತೆ ಬೀಳುವ ಮರಳ ಗೋಪುರವಿದ್ದಂತೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If there are hundred people there will be hundreds of hundred experiences. On any given day, every single person will have a hundred different ways of experiencing God. How can one measure them? (to determine which one is better). What should be the scale (to measure it against)? The description of God based on personal experience is like sand castles - momentary existence. - Mankutimma
Video Coming Soon
Detailed video explanations by scholars and experts will be available soon.