Mankutimmana Kagga by D.V. Gundappa
ಎನ್ನ ಬೇಡಿಕೆ ನಷ್ಟವಹುದೆಂತು ದೇವನಿರೆ? । ಅನ್ಯಾಯ ಜಗವೆಲ್ಲ; ದೇವನಿರನೆನುತ ॥ ತನ್ನ ತನ್ನನುಭವವ ನಂಬಲೋರೊರ್ವನುಂ । ಭಿನ್ನವಾಗದೆ ಸತ್ಯ? - ಮಂಕುತಿಮ್ಮ ॥ ೫೧೫ ॥
enna bEDike naShTavahudentu dEvanire? । anyAya jagavella; dEvaniranenuta ॥ tanna tannanubhavava nambalu orvorvanum । bhinnavAgade satya? - Mankutimma ॥ 515 ॥
"ಆ ದೇವನಿರುವುದಾದರೆ ನನ್ನ ಬೇಡಿಕೆಗಳು ಈಡೇರದೆ ಇರಲು ಸಾಧ್ಯವೇ?" ಎಂದು ದೇವರನ್ನು ನಂಬುವವನು ಆಶಾಭಾವದಿಂದ ಇರುತ್ತಾನೆ. ಈ ಜಗತ್ತಿನಲ್ಲಿ ಎಷ್ಟೊಂದು ಅನ್ಯಾಯಗಳು ಅಕ್ರಮಗಳು ದುಷ್ಟತನಗಳು ನಡೆಯುತ್ತಿರುವಾಗ " ಛೆ! ಇಷ್ಟೊಂದು ಅನ್ಯಾಯಗಳಿರುವಾಗ ಆ ದೇವರೆಂಬುವನು ಇರಲು ಸಾಧ್ಯವಿಲ್ಲ ಎಂದು ವಾಸ್ತವವಾದಿ ಅಥವಾ ನಾಸ್ತಿಕವಾದಿ ಇರುತ್ತಾನೆ. ಹೀಗೆ, ಇರುವ ಒಂದು ಸತ್ಯಕ್ಕೆ ಅವರವರ ಅನುಭವಕ್ಕೆ ಅನುಸಾರವಾಗಿ ಬೇರೆ ಪರಿಭಾಷೆಯನ್ನು ಕೊಟ್ಟಾಗ ಸತ್ಯವು ಭಿನ್ನವಾಗದೆ? ಎಂದು ಪ್ರಶ್ನಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Can one deny the existence of God just because his wishes were not fulfilled? Can he say that the entire world in unfair? There is no God at all? If every one based their notion of God on his own experience (material), then will the truth not be fractured? (as opposed to being universal) - Mankutimma
Video Coming Soon
Detailed video explanations by scholars and experts will be available soon.