Mankutimmana Kagga by D.V. Gundappa
ಎನಗೆ ಸುಖವಿಲ್ಲವದರಿಂ ದೇವರಿರನೆನ್ನು-। ವನುಮತಿಯ ನೀಂ ಗೆಯ್ಯೆ, ಸುಖಿಯದೇನನುವಂ ॥ ತನುಬಾಹ್ಯಕರಣದನುಭವಕಿಂತ ಸೂಕ್ಷ್ಮ ತರ- । ದನುಭವವ ನೀನರಸೊ - ಮಂಕುತಿಮ್ಮ ॥ ೫೧೪ ॥
enage sukhavilla adarim dEvariraru ennuva । anumatiya nIm geyye sukhiyadEnanuvam ॥ tanu bAhya karaNada anubhavakinta sUkShma tarada । anubhava nInaraso - Mankutimma ॥ 514 ॥
ನಿನಗೆ ಕಷ್ಟ ಬಂದಿದೆ, ಹಾಗಾಗಿ ಆ ದೇವರೇ ಇಲ್ಲ ಎಂದು ನೀನು ಅನುಮಾನ ಪಟ್ಟರೆ, ಸುಖಪಡುತ್ತಿರುವವನು ಏನು ಹೇಳುತ್ತಾನೆ ಎಂದು ನೋಡು. ಈ ಸುಖ ದುಃಖವೆನ್ನುವುದು ಕೇವಲ ಹೊರಗಿನ ಅನುಭವ. ಆದ್ದರಿಂದ ದೇಹ ಮನಸ್ಸು ಬುದ್ಧಿಗಳೆಂಬ ಬಾಹ್ಯ ‘ಕರಣ’ಗಳಿಗೂ ಅತೀತವಾದ ಸೂಕ್ಷತರವಾದ ಆನಂದದ ಅಥವಾ ಸುಖದ ಅನುಭವವನ್ನು ನೀನು ಹುಡುಕು ಎಂದು ಒಂದು ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ
If you say there is no God because you don't have happiness then what do you think a happy person may say? Your notion of God should not be tied to your happiness - especially those that are related to body and external world. If you seek for an experience that is beyond the senses, then you will be happy (with your realization of God). - Mankutimma
Video Coming Soon
Detailed video explanations by scholars and experts will be available soon.