Mankutimmana Kagga by D.V. Gundappa
ಆವುದರಿನಾವಾಗ ದೈವ ತಾನೊಲಿದೀತೊ? । ಪೂರ್ವಿಕದ ನಿಯತಿಯನದೆಂದು ಸಡಲಿಪುದೋ? ॥ ಭಾವಿಸುಕೃತವದೆಂದು ಪೂರ್ವದುರಿತಕೆ ಮಿಗಿಲೊ? । ದೈವಿಕರಹಸ್ಯವದು- ಮಂಕುತಿಮ್ಮ ॥ ೫೧೩ ॥
aavudarina aavAga daiva tAnu olidIto? । pUrvikada niyatiyanu adendu saDalipudo? ॥ bhAvisukRutavu adendu pUrva duritake migilo? । daivika rahasyavadu - Mankutimma ॥ 513 ॥
ನಾವು ಏನು ಮಾಡಿದರೆ ಆ ದೈವ ನಮಗೆ ಒಲಿದೀತು? ಹಿಂದಿನಿಂದ ಪಡೆದುಬಂದ ಕರ್ಮ ಶೇಷವನ್ನು ಎಂದು ಸಡಿಲಿಸೀತು. ನಮ್ಮ ಮುಂದಿನ ಪುಣ್ಯವು ಹಿಂದಿನ ಪಾಪಕ್ಕಿಂತ ಎಂದು ಅಧಿಕವಾಗುವುದೋ ಯಾವುದೂ ನಮಗೆ ಅರ್ಥವಾಗುವುದಿಲ್ಲ. ಅದೊಂದು ದೈವೀಕ ರಹಸ್ಯವೆಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
It can not be said with certainty when and by what means will fate help us. Or when it will release us from the clutches of previous actions. When will our present and future good deeds match up to the past sins? All these are part of the divine secret. - Mankutimma
Video Coming Soon
Detailed video explanations by scholars and experts will be available soon.