Mankutimmana Kagga by D.V. Gundappa
ಅರ್ಥವುಂಟನುಭವಕ್ಕಾದೊಡದು ಮಿತದರ್ಥ । ಸ್ವಾರ್ಥ ಮಿತವಾದಂತೆ ವಿಸ್ತರಿಪುದರ್ಥ ॥ ಸಾರ್ಥಕವಪ್ಪುದಾರ್ಷೇಯಾರ್ಥದೊಡವೆರೆಯೆ । ಪಾರ್ಥನನುಭವದಂತೆ - ಮಂಕುತಿಮ್ಮ ॥ ೫೧೮ ॥
arthavunTu anubhavakke Adodadu mitada artha । svArtha mitavAdante vistaripudu artha ॥ sArthakavappudu aarSheya arthadi odavereye । pArthana anubhavadante - Mankutimma ॥ 518 ॥
ನಮ್ಮ ಪ್ರತೀ ಅನುಭವಕ್ಕೂ ಅರ್ಥವಿದೆಯಾದರೂ ಅದು ಕೇವಲ ನಮ್ಮ ಪರಿಮಿತ ಮತಿಯ ಮಿತಿಗೆ ಸೀಮಿತವಾದದ್ದು. ಏಕೆಂದರೆ ಅಲ್ಲಿ ಸ್ವಾರ್ಥದ ಲೇಪವಿರುತ್ತದ್ದೆ. ಸ್ವಾರ್ಥದ ಭಾವ ಕಡಿಮೆಯಾದಲ್ಲಿ ಆ ಭಾವದ ಅರ್ಥ ವಿಸ್ಥಾರವಾಗುತ್ತದೆ. ಅರ್ಜುನನಿಗೆ ಯುದ್ಧರಂಗದಲ್ಲಿ ವೈರಾಗ್ಯ ಬಂದಾಗ ಹೇಗೆ ಅವನಿಗೆ ‘ಭಗವದ್ಗೀತೆ’ ಯ ಭೋಧನೆಯಾಯಿತೋ ಹಾಗೆಯೇ ನಮ್ಮ ಸನಾತನ ಋಷಿಮುನಿಗಳಿಂದ ಹರಿದುಬಂದಿರುವ ಜ್ಞಾನದ ವಾಹಿನಿಯೊಂದಿಗೆ ನಮ್ಮ ಭಾವ ಮಿಳಿತವಾದರೆ ಆಗ ನಾವು ಭಾವ ಸಾರ್ಥಕ್ಯವನ್ನು ಪಡೆಯಬಹುದು ಎಂದು ಭಾವಗಳ ಔನ್ನತ್ಯವನ್ನು ಹೇಗೆ ಪಡೆಯಬಹುದು ಎಂದು ನಮಗೆ ಮಾರ್ಗ ತೋರಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
There is some meaning to individual experiences. But that is limited meaning. The same realization expands when selfishness is reduced. When that realization is coupled with learnings from the ancient wise sages, then it becomes truly meaningful - just like the one Arjuna had in the battlefield of Kurukshetra after listening to Krishna (the advice of Geeta). - Mankutimma
Video Coming Soon
Detailed video explanations by scholars and experts will be available soon.