Back to List

Kagga 510 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಿನ್ನೇಳುಬೀಳುಗಳು ನಿನ್ನ ಸೊಗ ಗೋಳುಗಳು । ನಿನ್ನೊಬ್ಬನೋಸುಗವೆ ನೆಡೆವ ಯೋಜನೆಯೇಂ? ॥ ಇನ್ನದೆನಿಬರ ಜೀವಪಾಕವದರಿಂದಹುದೊ! । ಛಿನ್ನವಾ ಋಣಮಾರ್ಗ - ಮಂಕುತಿಮ್ಮ ॥ ೫೧೦ ॥

ninna ELu bILugaLu ninna soga gOLugaLu । ninnobbana Osuga neDeva yojaneyEm? ॥ innadu enibara jIvapAkavu adarindahudo! । ChinnavA RuNamArga - Mankutimma ॥ 510 ॥

Meaning in Kannada

ನಿನ್ನ ಬದುಕಿನ ಏರಿಳಿತಗಳು, ನಿನ್ನ ಸಂತೋಷ ಮತ್ತು ದುಃಖಗಳೆಲ್ಲವೂ ನಿನ್ನೊಬ್ಬನಿಗಾಗಿಯೇ ನಡೆದ ಒಂದು ಯೋಜನೆಯೆಂದು ನೀನಂದುಕೊಳ್ಳಬೇಡ. ನಿನ್ನ ಜೀವನ ಹಲವಾರು ಕಾರಣಗಳ ಪ್ರಭಾವದಿಂದ ರೂಪುಗೊಂಡಿದೆ.ಆದರೆ ಯಾರಿಂದ ಯಾವ ಋಣ ಬಂದಿದೆ,ಎಷ್ಟು ಬಂದಿದೆ ಎನ್ನುವುದು ನಮಗರಿವಾಗದ ರಹಸ್ಯ, ಎಂದು ಒಂದು ಗೂಢವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

Do you think the whole world is a plan for you - for your rises and falls, for your happiness and grief? Have you ever thought how actions are effecting the lives of so many other beings? The chain of causation is very difficult to follow. - Mankutimma

Themes

Life

Video Section

Video Coming Soon

Detailed video explanations by scholars and experts will be available soon.