Back to List

Kagga 509 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪ್ರಾರಾಬ್ಧದಲಿ ನಿನ್ನ ಪುಣ್ಯವೆನಿತಾನುಮಿರೆ । ಸೇರೆ ಪಶ್ಚಾತಾಪ ಭಾರವದರೊಡನೆ ॥ ದಾರುಣದ ಕರ್ಮನಿಯತಿಯನಿನಿತು ಶಿಥಿಲಿಪುದು । ಕಾರುಣ್ಯದಿಂ ದೈವ - ಮಂಕುತಿಮ್ಮ ॥ ೫೦೯ ॥

prArAbdhadali ninna puNyavi initAnum ire । sEre pashchAtApa bhAravu adaroDane ॥ dAruNada karmaniyatiyanu initu shithilipudu । kAruNyadim daiva - Mankutimma ॥ 509 ॥

Meaning in Kannada

ನಮ್ಮ ಪೂರ್ವ ಕರ್ಮಗಳಿಗನುಸಾರವಾಗಿ ಘೋರವಾದ ಕರ್ಮಫಲಗಳನ್ನು ಅನುಭವಿಸಲೇ ಬೇಕಾದಾಗ, ಪೂರ್ವ ಸಂಚಿತ ಕರ್ಮಗಳಲ್ಲಿ ಸ್ವಲ್ಪವಾದರೂ ಪುಣ್ಯವು ಇದ್ದರೆ, ಅದರೊಟ್ಟಿಗೆ ನಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪವೂ ಸೇರಿದರೆ, ದೈವದ ಕರುಣೆಯಿಂದ ಅನುಭವಿಸಬೇಕಾದ ಕಷ್ಟಗಳ ತೀವ್ರತೆ ಸ್ವಲ್ಪವಾದರೂ ಕಡಿಮೆಯಾಗುತ್ತದೆ ಎಂದು ಉಲ್ಲೇಖಮಾಡಿದ್ದಾರೆ, ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

If you have carried over punya (Good Karma) from previous births and you add to that by behaving well and feeling true remorse for all bad deeds, then God will fell compassionate and will soften the punishment that has to be meted out (as per law) in your afterlife. - Mankutimma

Themes

DevotionLifeMoralityFateLove

Video Section

Video Coming Soon

Detailed video explanations by scholars and experts will be available soon.