Mankutimmana Kagga by D.V. Gundappa
ತಕ್ಕಡಿಯ ದೈವ ಪಿಡಿದದರೊಂದು ತಟ್ಟೆಯಲಿ । ಒಕ್ಕುವುದು ಬಿಡದೆ ಜೀವಿಯ ಪಾಪಚಯವ ॥ ಇಕ್ಕುವುದು ಸುಕೃತಗಳನಿನ್ನೊಂದರೊಳಗಲ್ಲಿ । ಭಕ್ತಿ ಪಶ್ಚಾತಾಪ - ಮಂಕುತಿಮ್ಮ ॥ ೫೦೮ ॥
takkaDiya daiva piDidu adara ondu taTTeyali । okkuvudu biDade jIviya pApachayava ॥ ikkuvudu sukRutagaLanu innondaroLage alli । bhakti pashchAtApa - Mankutimma ॥ 508 ॥
ನಾವು ಮಾಡಿದ ಕೃತ್ಯಗಳನ್ನು ಒಳ್ಳೆಯ ಮತ್ತು ಕೆಟ್ಟದ್ದೆಂದು ವಿಂಗಡಿಸಿ, ಒಂದು ತಕ್ಕಡಿಯಲ್ಲಿ ಒಂದು ತಟ್ಟೆಗೆ ಸತ್ಕರ್ಮಗಳನ್ನೂ ಮತ್ತೊಂದು ತಟ್ಟೆಗೆ ಪಾಪಕರ್ಮಗಳನ್ನೂ ಹಾಕಿ ಆ ದೈವ ‘ತುಲನೆ’ ಮಾಡುತ್ತದಂತೆ. ಸುಕೃತಗಳ ಫಲ ಸುಖದ ರೂಪದಲ್ಲಿ ಮತ್ತು ಪಾಪ ಕರ್ಮಗಳ ಫಲ ಕಷ್ಟಗಳ ರೂಪದಲ್ಲಿ ನಮಗೆ ಸಿಗುತ್ತದೆ. ಈಗಾಗಲೇ ಗಂಟು ಕಟ್ಟಿಕೊಂಡ ಪಾಪ ಕ್ರಮಗಳನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಅವುಗಳು ನಮ್ಮ ಮೇಲೆ ಭೀರುವ ಪ್ರಭಾವ ಮತ್ತು ಪರಿಣಾಮಗಳ ತೀವ್ರತೆಯನ್ನು ಭಕ್ತಿ ಮತ್ತು ಪಶ್ಚಾತ್ತಾಪಗಳಿಂದ ಕಡಿಮೆ ಮಾಡಿಕೊಳ್ಳಬಹುದು ಎನ್ನುವುದೇ ಮಾನ್ಯ ಗುಂಡಪ್ಪನವರ ಈ ಮುಕ್ತಕದ ಅಂತರ್ಯ.
God has a balance to measure our deeds. On one plate he keeps all the sins of man without letting even one go unaccounted. On the other he places all the good deeds which includes faith, devotion and remorse. It is up to us to tilt the scale either way. - Mankutimma
Video Coming Soon
Detailed video explanations by scholars and experts will be available soon.