Back to List

Kagga 507 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದಂಡನಿರ್ಣಯದಿ ನೀಂ ಕ್ಷಮಿಸೆನಲ್ ನ್ಯಾಯಪತಿ । ಹಿಂದಿನಾ ನಿನ್ನೊಳ್ತನವನ್ ಅಂದಿನಳಲನ್ ॥ ತಂದೆಬಗೆಯಿಂ ಬಗೆದು ಶಾಸನೋಗ್ರವನಿನಿತು । ಕುಂದಿಸಲಿಕಾಗದೇಂ? - ಮಂಕುತಿಮ್ಮ ॥ ೫೦೭ ॥

danDanirNayadi nIm kShamisu enal nyAyapati । hindinA ninna oLtanavan andina aLalan ॥ tande bageyim bagedu shAsanOgravanu initu । kundisalike AgadEm? - Mankutimma ॥ 507 ॥

Meaning in Kannada

‘ನನ್ನ ಶಿಕ್ಷೆ ಕಡಿಮೆ ಮಾಡಿ ಎಂದು’ ಬೇಡಿದರೆ ನ್ಯಾಯಾಧಿಪತಿಯು ಅಪರಾಧಿಯ ಹಿಂದಿನ ಸದ್ವರ್ತನೆ ಮತ್ತು ಹಿಂದೆ ಅವನು ಅನುಭವಿಸಿರುವ ದುಃಖವನ್ನು ಪರಿಗಣಿಸಿ, ತಂದೆ ತನ್ನ ಸುತನು ಸರಿ ಮಾರ್ಗದಲ್ಲಿರಲೆಂದು ಶಿಕ್ಷೆ ಕಡಿಮೆ ಮಾಡುವಂತೆ, ಶಿಕ್ಷೆಯ ತೀವ್ರತೆ ಮತ್ತು ಕಠಿಣತೆಯನ್ನು ಕಡಿಮೆಮಾಡಲಾರನೆ? ಎಂದು ಪ್ರಶ್ನಿಸುತ್ತಾ ಪರಮಾತ್ಮನ ಕೃಪೆಯಿಂದ ನಾವು ನಮ್ಮ ಪೂರ್ವ ಕರ್ಮ ಮತ್ತು ಅದರ ಪರಿಣಾಮಗಳ ತೀವ್ರತೆಯನ್ನು ಹೇಗೆ ಕಡಿಮೆಮಾಡಿಕೊಳ್ಳಬಹುದು ಎಂಬ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

At the time of giving a judgment, you will ask to be forgiven. The judge does look at all the good things you have done in the past and your present miseries. He can wear a fatherly hat and analyze the circumstances that lead the Can he not reduce the severity of the punishment based in this? - Mankutimma [Translator's note: Draw a parallel to God. He is the judge in the court of after-life.]

Themes

DevotionLifeMorality

Video Section

Video Coming Soon

Detailed video explanations by scholars and experts will be available soon.