Mankutimmana Kagga by D.V. Gundappa
ದೊರೆಗೆ ನೀಂ ಬಿನ್ನಯಿಸೆ ನೂರೆಂಟು ಬಯಕೆಗಳ । ಸರಿ ತನಗೆ ತೋರ್ದೆನಿತನ್ ಅದರೊಳವನೀವಂ ॥ ಅರಿಕೆಯೆಲ್ಲವನಡಸದಿರೆ ದೊರೆಯೆ ಸುಳ್ಳಹನೆ? । ಕರುಣೆ ನಿರ್ಬಂಧವೇಂ? - ಮಂಕುತಿಮ್ಮ ॥ ೫೦೬ ॥
dorege nIm binnayise nUrenTu bayakegaLa । sari tanage tOrda enitan adaroLu avanu eevam ॥ arikeyellavanu aDasadire doreye suLLahane? । karuNe nirbandhavEm? - Mankutimma ॥ 506 ॥
ರಾಜನಿಗೆ ನೀನು ನಿನ್ನ ನೂರೆಂಟು ಬಯಕೆಗಳನ್ನು ಅರಿಕೆಮಾಡಿದರೆ, ಅವನಿಗೆ ಯಾವುದು ಸರಿಯೆಂದು ತೋರುವುದೋ ಅದನ್ನು ನೀಡುವನು. ನೀ ಕೇಳಿದ್ದೆಲ್ಲ ಕೊಡಲಿಲ್ಲವೆಂದರೆ ಅವನು ರಾಜನೇ ಅಲ್ಲವೆಂದು ಹೇಳಲು ಸಾಧ್ಯವೇ? ಹಾಗೆಯೇ ಪರಮಾತ್ಮನ ಕರುಣೆಯೂ ಸಹ ಎಂದು ಭಗವದ್ಕೃಪಾವಿಧಾನವನ್ನು ನಮಗೆ ಅರುಹಿದ್ದಾರೆ ಈ ಮುಕ್ತಕದಲ್ಲಿ ಮಾನ್ಯ ಗುಂಡಪ್ಪನವರು.
You may present hundreds of requests in front of a King. He may choose to grant a few that he feels are just. Just because he did not grant all your wishes, you cannot deny that he is the King (or that the king exists). Do you think that having compassion on you is binding on him? - Mankutimma [Translator's note: Draw a parallel to God. One can not deny his existence on mere fact that all his wishes were not answered.]
Video Coming Soon
Detailed video explanations by scholars and experts will be available soon.