Back to List

Kagga 505 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೈವಕೃಪೆಯೆನುವುದೇಂ? ಪರಸತ್ತ್ವನವವೃಷ್ಟಿ । ಜೀವಗುಣ ಪಕ್ವಪಟ್ಟಂತದರ ವೇಗ ॥ ಭಾವಚೋದನೆಗಳಲಿ ಬಾಹ್ಯಸಾಧನೆಗಳಲಿ । ತೀವಿ ದೊರೆಕೊಳುವುದದು - ಮಂಕುತಿಮ್ಮ ॥ ೫೦೫ ॥

daivakRupe enuvodEm? parasattva nava vRuShTi । jIvaguNa pakvapaTTante adara vEga ॥ bhAvachOdanegaLali bAhyasAdhanegaLali । tIvi dorekoLuvudadu - Mankutimma ॥ 505 ॥

Meaning in Kannada

ದೇವರ ಕೃಪೆ ಎಂದರೆ ಏನು? ಪ್ರತಿನಿತ್ಯ ನವ ನವೀನ ರೀತಿಯಲ್ಲಿ ನಮಗೆ ಸಿಗುವ ಅವನ ಕೃಪೆಯಷ್ಟೆ. ಜೀವಿ ತನ್ನ ಅಂತರಂಗದ ಭಾವದಲ್ಲಿ ಮತ್ತು ಬಾಹ್ಯ ನಡವಳಿಕೆಗಳಲ್ಲಿ ಎಷ್ಟು ಬೇಗ ಪಕ್ವಗೊಂಡರೆ, ಅಷ್ಟೇ ವೇಗದಲ್ಲಿ ಅವನಿಗೆ ಆ ‘ಪರಮಾತ್ಮನ ಕೃಪಾಧಾರೆ’ ಸುರಿದು ತುಂಬಿಕೊಳ್ಳುವುದು ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

What is God's grace? It is just the fresh shower of cosmic spirit (energy) on this world. How much and how fast you receive depends on the your maturity in your emotions and actions. When you thoughts and action are noble, the grace is also abundant. - Mankutimma

Themes

DevotionLifeDeathLove

Video Section

Video Coming Soon

Detailed video explanations by scholars and experts will be available soon.