Back to List

Kagga 504 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಗಗನ ಬಿಸಿಗವಸಾಗಿ, ಕೆರೆಗಳಾವಿಗೆಯಾಗಿ । ಜಗದುಸಿರೆ ಹೊಗೆಯಾಗಿ ಧಗಧಗಿಸುವಂದು ॥ ಒಗೆದೆತ್ತಣಿನೊ ರಾತ್ರಿಯಲಿ ಧರೆಗೆ ತಂಪೆರೆವ । ಮುಗಿಲವೊಲು ದೈವಕೃಪೆ - ಮಂಕುತಿಮ್ಮ ॥ ೫೦೪ ॥

gagana bisi gavasAgi, keregaLu AvigeyAgi । jagada usire hogeyAgi dhagadhagisuvandu ॥ ogedu ettaNino rAtriyali dharege taMpereva । mugilavolu daiva kRupe - Mankutimma ॥ 504 ॥

Meaning in Kannada

ಗಗನವು ಸೂರ್ಯನ ಪ್ರತಾಪದಿಂದ ಶಾಖ ಹೆಚ್ಚಾಗಿ ಇಡೀ ಧರೆಗೆ ಒಂದು ಬಿಸಿಯ ಹೊದಿಕೆಯಂತಾಗಿ, ಭೂಮಿಯ ಮೇಲಿನ ಎಲ್ಲಾ ಕೆರೆಗಳು ಆ ಶಾಖದಿಂದ ಒಲೆಗಳಂತಾಗಿ ನೀರೆಲ್ಲ ಬತ್ತಿ, ಜಗತ್ತಿನ ಉಸಿರೆಲ್ಲ ಹೊಗೆಯಂತೆ ಧಗಧಗಿಸುವಾಗ, ರಾತ್ರಿಯಲ್ಲಿ ಎಲ್ಲಿಂದಲೋ ಮೋಡಗಳೆಲ್ಲ ಒಂದುಗೂಡಿ ಧರೆಯನ್ನು ತಂಪಾಗಿಸಲು ಮಳೆಯ ಸುರಿಸುವಂತೆ, ಕಷ್ಟಗಳ ಸರಮಾಲೆಗಳಲ್ಲಿ ಸಿಕ್ಕು, ನಮಗೆ ಜೀವನವು ದುರ್ಭರವಾಗಿ, ಬದುಕಿನಲ್ಲಿ ತಾಪ ಹೆಚ್ಚಾಗಿ, ಅನ್ಯ ದಾರಿಯಿಲ್ಲದೆ ಕಂಗಾಲಾಗಿ ನಾವು ನಿಂತಾಗ, ನಮಗೆ ಆ ದೈವದ ಕೃಪೆ ಬರುತ್ತದೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

God's grace is showered on us when we are in deep trouble. That is when we appreciate it the most. On a day when the sky feels like a warm blanket, the lakes feel like ovens, the gusts of wind (breath of the nature) seem like smoke - the clouds from some where shower the earth with rain cooling her. How welcome is that rain? - Mankutimma

Themes

DevotionSufferingNatureWar

Video Section

Video Coming Soon

Detailed video explanations by scholars and experts will be available soon.