Back to List

Kagga 503 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವಸತ್ತ್ವದಪಾರಭಂಡಾರವೊಂದಿಹುದು । ಸಾವಕಾರನದೃಷ್ಟನ್ ಅದನಾಳುತಿಹನು ॥ ಅವಶ್ಯಕದ ಕಡವನವನೀವುದುಂಟಂತೆ! । ನಾವೊಲಿಪುದೆಂತವನ? - ಮಂಕುತಿಮ್ಮ ॥ ೫೦೩ ॥

jIva sattvada apAra bhanDara ondihudu । sAvakAranu adRuShTan adanu ALutihanu ॥ avashyakada kaDavanu avanu eeyuvudunTante! । nAvu olipudentu avana? - Mankutimma ॥ 503 ॥

Meaning in Kannada

ಜಗತ್ತಿನ ಸಮಸ್ತ ಜೀವಕೋಟಿಗೆ ಏನೇನು ಬೇಕೋ ಅವೆಲ್ಲವೂ ಒಳಗೊಂಡಂತೆ ಈ ಜಗತ್ತು ಸತ್ವಭರಿತವಾಗಿದೆ. ಈ ಸತ್ವಕ್ಕೆಲ್ಲ ಒಡೆಯ, ಅಧಿಪತಿ ಆ ಪರಮಾತ್ಮ. ನಾವು ಕೇಳಿ ಬಯಸಿದ್ದನ್ನು ಕೊಡಲು ಅವನಿಗೆ ಸಾಧ್ಯವಿದೆ. ಆದರೆ ಅವನಿಂದ ನಮಗೆ ಬೇಕಾದ್ದನ್ನು ಪಡೆಯಲು ಅವನನ್ನು ಒಲಿಸುವುದು ಹೇಗೆ ಎನ್ನುವುದೇ ನಮ್ಮ ಪ್ರಶ್ನೆ ಎಂದು ಒಂದು ಗಹನವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

There is a huge stockpile of life essentials. An invisible wealthy master is controlling it. He is known to loan essentials on a need basis once in a while. But, how to entice him to do that? - Mankutimma

Themes

Life

Video Section

Video Coming Soon

Detailed video explanations by scholars and experts will be available soon.