Back to List

Kagga 502 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸೃಷ್ಟಿಯದ್ಭುತಶಕ್ತಿಯುಳ್ಳೊರ್ವನಿರಲು ನ- । ಮ್ಮಿಷ್ಟಗಳನರಿತು ನೀಡುವುದವನಿಗರಿದೇಂ? ॥ ಇಷ್ಟವಾತನೊಳುದಿಸುವುವಂತೆ, ಚೋದಿಪುದೆಂತು? । ಕಷ್ಟ ನಮಗಿಹುದಷ್ಟೆ - ಮಂಕುತಿಮ್ಮ ॥ ೫೦೨ ॥

sRuShTiya adbhuta shaktiyuLLa orvanu iralu । nammiShTagaLanu aritu nIDuvudu avanige aridEm? ॥ iShTavAtaboLu udisuvante, chOdipudentu? । kaShTa namagihudu aShTe - Mankutimma ॥ 502 ॥

Meaning in Kannada

ಬೃಹತ್ತಾದ ಈ ಜಗತ್ತಿನಲ್ಲಿ ನಾವು ಒಂದು ಧೂಳ ಕಣದ ಲಕ್ಷದ ಒಂದು ಭಾಗವೂ ಅಲ್ಲ. ಆದರೆ ಅವನೋ, ಪರಮಾತ್ಮ, ಸೃಷ್ಟಿಯನ್ನೇ ಮಾಡುವ ಶಕ್ತಿಯುಳ್ಳವನು ಮತ್ತು ಬ್ರಹ್ಮಾಂಡಕ್ಕಿಂತ ಹಿರಿದಾದವನು. ಹಾಗಿರುವಾಗ ನಮ್ಮನ್ನು ಸೃಷ್ಟಿಸಿದ ಅವನಿಗೆ ನಮ್ಮ ಅವಶ್ಯಕತೆಗಳು ಮತ್ತು ನಮ್ಮ ಇಷ್ಟಗಳನ್ನು ಅರಿತುಕೊಂಡು ಎಲ್ಲವನ್ನೂ ನೀಡಲು ಗೊತ್ತಿಲ್ಲವೇನು? ಆದರೆ ಹಾಗೆ ನಮಗೆ ನೀಡುವ ಇಷ್ಟವನ್ನು ಅವನಲ್ಲಿ ಉಂಟಾಗುವಂತೆ ಮಾಡುವುದೇ ನಮಗಿರುವ ಕಷ್ಟ ಎಂದು ನಮ್ಮ ಪ್ರಾರ್ಥನೆ ಪೂಜೆಗಳ ಫಲ ಸ್ವರೂಪವನ್ನು ವಿಶ್ಲೇಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

If we believe in an all powerful being (called God), then it must not be a big deal for him to make learn about our wishes and make them come true. The only difficulty we have is to make him want to make our wishes come true and urge him to do so. - Mankutimma

Themes

Devotion

Video Section

Video Coming Soon

Detailed video explanations by scholars and experts will be available soon.