Mankutimmana Kagga by D.V. Gundappa
ಯುಕ್ತಿಸಾಮ್ರಾಜ್ಯದಲಿ ಭಕ್ತಿ, ಬಡ ಪರದೇಶಿ । ಶಕ್ತಿ ಚತುರತೆಯುಡುಗಿ ನೀನು ಸೋತಂದು ॥ ಉತ್ಕ್ರಮಣದರೆಮನದಿ ದೈವವನು ಪಿಡಿದೇನು? । ಭಕ್ತಿ ರಕ್ತದಿ ಪರಿಗೆ - ಮಂಕುತಿಮ್ಮ ॥ ೫೦೧ ॥
yukti sAmrAjyadali bhakti, baDa paradEshi । shakti chaturateyu uDugi nInu sOtandu ॥ utkramanadi aremanadi daivavanu piDidEnu? । bhakti raktadi parige - Mankutimma ॥ 501 ॥
ನಮ್ಮ ಅತಿ ಬುದ್ಧಿವಂತಿಕೆ ಉಪಯೋಗಿಸಿ ನಾವು ನಡೆಸುವ ಜೀವನದಲ್ಲಿ ಹಲವಾರು ಚತುರತೆಗಳನ್ನು ಬಳಸಿ ಬದುಕಬಹುದು. ಹಾಗೆ ಬದುಕುವಾಗ, ದೈವ ಭಕ್ತಿಯೆನ್ನುವುದು ನಮ್ಮಲ್ಲಿ ಸೊರಗುತ್ತದೆ, ಬಡವಾಗುತ್ತದೆ. ದೇಹದ ಶಕ್ತಿಯು ಅಡಗಿ ನಾವು ಸೊರಗಿದಾಗ ‘ನಮ್ಮದೆಲ್ಲ ಮುಗಿಯಿತು, ಹೇ ಪರಮಾತ್ಮ ನೀನೆ ಗತಿ’ ಎಂದು ಸಾಯುವ ಸಮಯದಲ್ಲಿ ಭಕ್ತಿ ತೋರಿದರೆ ಏನೂ ಪ್ರಯೊಜನವಿಲ್ಲ. ಭಕ್ತಿಯನ್ನುವುದು ನಮ್ಮ ದೇಹದಲ್ಲಿ ರಕ್ತ ಹರಿದಂತೆ ನಮ್ಮ ಮನಸ್ಸಿನಲ್ಲಿ ಸದಾಕಾಲ ಪ್ರಹಿಸುತ್ತಿರಬೇಕು ಎಂದು ಭಕ್ತಿ ನಮ್ಮಲ್ಲಿ ಹೇಗಿರಬೇಕು ಎನ್ನುವುದನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕ್ದಲ್ಲಿ.
In a world everything is driven by intellect, devotion (towards God) is like a poor foreigner. What will you do when your strength and smartness are diminished? What is the use of praying God at the time of death alone? Devotion should be like blood - with in you all your life. - Mankutimma
Video Coming Soon
Detailed video explanations by scholars and experts will be available soon.