Back to List

Kagga 500 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೇವನೇನತಿಶಯಿತಮಾನಿಸನೆ ಭೋಗಕ್ಕೆ? । ಹೂವುಣಿಸು ಮುಡುಪೊಡವೆಯವನಿಗಂ ಬೇಕೆ? ॥ ಆವುದೊಳ್ಳಿತೊ ತನಗೆ ನರನದನು ಪರಮಂಗೆ । ನೈವೇದಿಪುದು ಸಾಜ - ಮಂಕುತಿಮ್ಮ ॥ ೫೦೦ ॥

dEvanEnu atishayita mAnisane bhOgakke? । hUvu uNisu muDipu oDaveyu avanigam bEke? ॥ Avudu oLLito tanage naranu adanu paramange । naivEdipudu sAja - Mankutimma ॥ 500 ॥

Meaning in Kannada

ನಾವು ಪೂಜೆಮಾಡುವ ಆ ದೇವನು ಅತಿಶಯದ ಮನುಷ್ಯನೇನು. ನಾ ಮಾಡುವ ಹೂವಿನಲಂಕಾರ, ಕಟ್ಟಿಡುವ ಮುಡುಪುಗಳು, ನಾ ತೊಡಿಸುವ ಒಡವೆ ವಸ್ತ್ರಗಳು ಅವನಿಗೆ ಬೇಕೆ? ತಮಗೆ ಏನು ಬೇಕೋ, ಯಾವುದು ಹಿತವೋ ಅದನ್ನು ಆ ದೇವನಿಗೆ ಅರ್ಪಿಸುವುದು ಮಾನವನ ಸಹಜ ಗುಣ ಎಂದು ಭಕ್ತಿಯ ಒಂದು ಆಯಾಮವನ್ನು ಇಲ್ಲಿ ವಿಚಾರಕ್ಕೆ ಇಟ್ಟಿದ್ದಾರೆ ನಮಗೆ ಈ ಮುಕ್ತಕದಲ್ಲಿ

Meaning & Interpretation

Is god simply a power human to indulge in our offerings? Does he want the flowers, eateries, clothes and ornaments that offer him? Man simply offers to God all those things that are dear to him. This is a well known fact. - Mankutimma

Themes

DevotionNature

Video Section

Video Coming Soon

Detailed video explanations by scholars and experts will be available soon.