Back to List

Kagga 499 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೇವಮಂದಿರ ಭಜನೆ ಪೂಜೆ ಪ್ರಸಾದಗಳು । ಜೀವನದಲಂಕಾರ, ಮನಸಿನುದ್ಧಾರ ॥ ಭಾವವಂ ಕ್ಷುಲ್ಲಜಗದಿಂ ಬಿಡಿಸಿ ಮೇಲೊಯ್ವು- । ದಾವುದಾದೊಡಮೊಳಿತು - ಮಂಕುತಿಮ್ಮ ॥ ೪೯೯ ॥

dEva mandira bhajane pUje prasAdagaLu । jIvanada alankAra, manasina uddhAra ॥ bhAvavam kShulla jagadim biDisi mEl oyyvudu । AvudAdoDam oLitu - Mankutimma ॥ 499 ॥

Meaning in Kannada

ದೇವಸ್ಥಾನಕ್ಕೆ ಹೋಗುವುದು, ಭಜನೆ ಮಾಡುವುದು, ಪೂಜೆ, ನೈವೇಧ್ಯ, ಪ್ರಸಾದ ಎಲ್ಲವೂ ನಮ್ಮ ಜೀವನಕ್ಕೆ ಒಂದು ಅಲಂಕಾರವಿದ್ದಂತೆ, ಮನಸ್ಸಿನ ಉದ್ಧಾರದ ಮಾರ್ಗವಷ್ಟೇ. ಇವೆಲ್ಲವನ್ನೂ ಮಾಡಿ ನಮ್ಮ ಮನಸ್ಸು ಬುದ್ಧಿಗಳನ್ನು ಈ ಕ್ಷಣಿಕ ಜಗತ್ತಿನ ಅಂಟಿನಿಂದ ಬಿಡಿಸಿಕೊಂಡು ನಮ್ಮ ಭಾವ ಮತ್ತು ಆಲೋಚನೆಗಳಲ್ಲಿ ಒಂದಿಷ್ಟು ಔನ್ನತ್ಯವನ್ನು ಪಡೆದರೆ ಒಳಿತು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ

Meaning & Interpretation

Temples, worship and offerings we make god are all decorations to our lives, They are meant to enrich our minds. If any such act will take our mind off from every day worries and raises it to a higher level then it is good - what ever it may be. - Mankutimma

Themes

DevotionMorality

Video Section

Video Coming Soon

Detailed video explanations by scholars and experts will be available soon.