Back to List

Kagga 498 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಂಗೀತ ತಲೆದೂಗಿಪುದು, ಹೊಟ್ಟೆ ತುಂಬೀತೆ? । ತಂಗದಿರನೆಸಕ ಕಣ್ಗಮೃತ, ಕಣಜಕದೇಂ? ॥ ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ । ಪೊಂಗುವಾತ್ಮವೆ ಲಾಭ - ಮಂಕುತಿಮ್ಮ ॥ ೪೯೮ ॥

sangeeta taledUgipudu, hoTTe tumbIte? । tangadirana esaka kaNge amRuta, kaNajake adEm? ॥ angaDiya mADadiru sukRutiprasaktiyali । ponguva Atmave lAbha - Mankutimma ॥ 498 ॥

Meaning in Kannada

ಸಂಗೀತವನ್ನು ಆಲಿಸಿದರೆ ಮನಸ್ಸಿಗೆ ಸಂತೋಷವಾಗುತ್ತದೆ, ಹೊಟ್ಟೆ ತುಂಬುತ್ತದೆಯೇ? ಇಲ್ಲ, ಹುಣ್ಣಿಮೆಯ ಬೆಳದಿಂಗಳು ಕಣ್ಣುಗಳಿಗೆ ಹಿತವಾಗಿರುತ್ತದೆ, ಮನೆಗೆ ದವಸ ದಾನ್ಯ ತಂದೀತೆ? ಇಲ್ಲ, ಹಾಗಾಗಿ ಸುಕೃತವನ್ನು ಎಸಗುವಾಗ ವಸ್ತುರೂಪದ ಪ್ರತಿಫಲವನ್ನು ಅಪೇಕ್ಷಿಸಬೇಡ. ಅಂತಹ ಒಳ್ಳೆಯ ಕೆಲಸ ಮಾಡುವುದರಿಂದ, ಕೇವಲ ಆತ್ಮಾನಂದವನ್ನು ಪಡೆಯಬೇಕು ಎಂದು ಸೂಚನೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

Meaning & Interpretation

Music may make head nod, but can it fill the stomach? Cool light from the moon is pleasing on the eyes, but will the granary fill with that? But these are all wonderful things with in tangible benefits. Don't make it a transaction at a shop by weighing everything against profits. The enriching soul is the only benefit of those acts. - Mankutimma

Themes

Morality

Video Section

Video Coming Soon

Detailed video explanations by scholars and experts will be available soon.