Mankutimmana Kagga by D.V. Gundappa
ಅರುಣೊದಯಪ್ರಭೆಯ, ಗಿರಿಶೃಂಗದುನ್ನತಿಯ । ವರುಣಾಲಯಾಯತಿಯ ನಿರುಕಿಸಿದೊಡಹುದೇಂ? ॥ ಬೆರಗು, ಬರಿಬೆರಗು, ನುಡಿಗರಿದೆನಿಪ್ಪಾನಂದ । ಪರಮಪೂಜೆಯುಮಂತು - ಮಂಕುತಿಮ್ಮ ॥ ೪೯೫ ॥
aruNodaya prabheya, girishRungada unnatiya । varuNAlaya Ayatiya nirukisidoDe ahudEm? ॥ beragu, bariberagu, nuDige aridenipa Ananda । paramapUjeyum antu - Mankutimma ॥ 495 ॥
ಮೂಡುತ್ತಿರುವ ಸೂರ್ಯನ ಬೆಳಕನ್ನು, ಮುಗಿಲನ್ನು ಮುಟ್ಟುವಂತೆ ನಿಂತಿರುವ ಗಿರಿಗಳ ಎತ್ತರವನ್ನು, ಅಳತೆಗೆ ಎಟುಕದ ಕಡಲ ವಿಸ್ತಾರವ ನೋಡಿದಾಗ ಅವುಗಳ ನಿಜ ಸೌಂದರ್ಯವು ನಮ್ಮನ್ನು ಬೆರಗಾಗಿಸಿ ನಮ್ಮಲ್ಲಿ ಮಾತಿಗೆ ಎಟುಕದಂತ ಒಂದು ಪ್ರಶಾಂತ,ಮೂಕ ಆದರೂ ಆನಂದದ ಭಾವವು ಬಂದು ನಿಲ್ಲುವುದಿಲ್ಲವೇ? ಹಾಗೆಯೇ ಪರಮಾತ್ಮನ ಪೂಜೆಯೂ ಆಗಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
When one watches the brilliance of sun rise, the heights of mountains and the vast expanse of the seas - what does he see/feel? Wonder, just wonder. Wonder that can not be described by words. Enjoying such a spectacle is a way we worship God. - Mankutimma
Video Coming Soon
Detailed video explanations by scholars and experts will be available soon.