Back to List

Kagga 496 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬೆರಗಾಗಿಪುವುವೆಲ್ಲ ಪಿರಿತನದ ನೋಟಗಳು । ಬೆರಗೆ, ಮೈಮರೆವೆ, ಸೊಲ್ಲಣಗುವುದೆ ಸೊಗಸು ॥ ಬೆರಗು ಚಿತ್ತವ ನುಂಗಲೊಗೆವ ಶಾಂತಿಯ ಕಾಂತಿ । ಪರಮನರ್ಚನೆಗೆ ವರ - ಮಂಕುತಿಮ್ಮ ॥ ೪೯೬ ॥

beragAgipuvavu ella piritanada nOTagaLu । berage, maimareve, soll anaguvude sogasu ॥ beragu chittava nungalu ogeva shAntiya kAnti । paramana archanege vara - Mankutimma ॥ 496 ॥

Meaning in Kannada

ಜಗತ್ಸೃಷ್ಟಿಯ ಹಿರಿದಾದ ನೋಟಗಳೆಲ್ಲ ನಮ್ಮನ್ನು ಬೆರಗಾಗಿಸುತ್ತವೆ. ಆ ಬೆರಗು ನಮ್ಮನ್ನು ಮೈಮರೆಯುವಂತೆ ಮಾಡಿದಾಗ ನಾವು ಮೂಕಸ್ಮಿತರಾಗುವುದೇ ಸೊಗಸು. ನಾವು ಹಾಗೆ ಬೆರಗಾದಾಗ ನಮ್ಮ ಮನಸ್ಸನ್ನು ಆವರಿಸುವ ಪ್ರಭೆಯ ಅಥವಾ ಕಾಂತಿಯ ಶಾಂತತೆಯೇ ನಮಗೆ ಆ ಪರಮಾತ್ಮನನ್ನು ಪೂಜಿಸಲು ಸಿಕ್ಕ ‘ವರ’ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

All sights of magnanimity will cause wonder. It is this feeling of wonder, getting lost, feeling speechless that is pleasing. When our intellect is encompassed by this wonder, there is peace. The radiance of this peace is the boon by which we please the creator. - Mankutimma

Themes

MoralityLovePeace

Video Section

Video Coming Soon

Detailed video explanations by scholars and experts will be available soon.