Back to List

Kagga 494 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹರಿಭಜಕರೊಳು ಭಯದಿನೊಗೆದುದೆನಿಬರ ಭಕುತಿ? । ವರದ ಮೇಲಣ ಭಕ್ತಿಯೆನಿಬರದು ನೋಡೆ? ॥ ಬರಿಯ ಸಂತೋಷದನುರಾಗರಸ ನಿಜಭಕ್ತಿ- । ಪರಮದಾಕರ್ಷೆಯದು - ಮಂಕುತಿಮ್ಮ ॥ ೪೯೪ ॥

hari bhajakaroLu bhayadin ogedudu enibara bhakuti? । varada mELaNa bhakti enibaradu nODe? ॥ bariya santOShada anurAga rasa nija bhakti - । paramada AkarSheyadu - Mankutimma ॥ 494 ॥

Meaning in Kannada

ಹರಿಭಕ್ತರಲ್ಲಿ ‘ಭಯ’ದಿಂದ ‘ಭಕ್ತಿ’ ಯನ್ನು ತೋರುವವರು ಮತ್ತು ಬೇಡಿಕೆಗಳನ್ನು ಮುಂದಿಟ್ಟು, ಆ ಬೇಡಿಕೆಗಳು ಈಡೇರಲೆಂದು ಭಕ್ತಿ ತೋರುವವರು, ಮತ್ತು ‘ ನೀ ನನಗೆ ಇದ ಕೊಟ್ಟರೆ, ನಾ ನಿನಗೆ ಅದ ಕೊಡುವೆ ಎಂದು ಆ ದೈವದೊಂದಿಗೆ ವ್ಯಾಪಾರದ ಭಕ್ತಿ ತೋರುವವರೇ ಹೆಚ್ಚಾಗಿದ್ದಾರೆ. ಆದರೆ ಕೇವಲ ಆನಂದದ ಮತ್ತು ಅನುರಾಗದ ಭಾವದಿಂದ ‘ನಿರಪೇಕ್ಷಿ ‘ಯಾಗಿ ತೋರುವುದೇ ನಿಜವಾದ ಭಕ್ತಿ ಎಂದು ಅರುಹುತ್ತಾರೆ ನಮಗೆ ಈ ಮುಕ್ತಕದಲ್ಲಿ.

Meaning & Interpretation

Among the devotees of the Lord, how many are driver by fear? How many have devotions towards boons and not God himself? It is real devotion when feeling of love and happiness is only sought from it. That is the attraction of God. - Mankutimma

Themes

DevotionNatureSelfLoveWar

Video Section

Video Coming Soon

Detailed video explanations by scholars and experts will be available soon.