Mankutimmana Kagga by D.V. Gundappa
ಬಹುಜನಂ ಕೈಮುಗಿದ ತೀರ್ಥದೊಳ್ ಕ್ಷೇತ್ರದೊಳ್ । ಮಹಿಮೆಯಲ್ಲೇನೆಂದು ಸಂಶಯಿಸಬೇಡ ॥ ವಿಹಿತಗೈದವರಾರು ವಸತಿಂ ದೈವಕ್ಕೆ? । ಮಹಿಮೆ ಮನಸೋತೆಡೆಯೊ - ಮಂಕುತಿಮ್ಮ ॥ ೪೯೩ ॥
bahujanam kaimugidu tIrthadoL kShEtradoL । mahimeyu alli Enendu samshayisabEDa ॥ vihitagaidavarAru vasatiyam daivakke? । mahime manasOteDeyo - Mankutimma ॥ 493 ॥
ಪರಮಾತ್ಮ ಸರ್ವ ವ್ಯಾಪಿ. "ಬಹಳ ಜನ ಕೈ ಮುಗಿಯಲು ಹೋಗುವ ಪುಣ್ಯತೀರ್ಥದಲ್ಲಿ ಅಥವಾ ಪುಣ್ಯಕ್ಷೇತ್ರದಲ್ಲಿ ಮಾತ್ರ ಪರಮಾತ್ಮನ ಮಹಿಮೆ ಇದೆಯೇನು?" ಎಂದು ಸಂಶಯಪಡಬೇಡ. ಆ ದೈವಕ್ಕೆ ಇಂತಹ ಕಡೆಯೇ ಇರಬೇಕು ಅಥವಾ ಇರಬಹುದು ಎಂದು ನಿಗದಿ ಪಡಿಸಿದವರಾರು? ಮಾನವರು ದೈವಕ್ಕೆ ಮನಸೋತೆಡೆಯಲ್ಲಾ ಆ ದೈವದ ಮಹಿಮೆ ಇರುವುದು ಎಂದು ಮನುಜರ ಭಕ್ತಿಯ ಪರಿಪರಿ ವಿಧಗಳನ್ನು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
When many people consider a place as miraculous and holy, don't get suspicious. Who can instruct God (power) to reside and act miraculously only there? Miracle is when (and where) the logical mind concedes defeat. (and belief takes over). - Mankutimma
Video Coming Soon
Detailed video explanations by scholars and experts will be available soon.