Mankutimmana Kagga by D.V. Gundappa
ಬಹಿರಂತರೈಕ್ಯವನು ನೆನಪಿಗಾಗಿಸಲೆಂದು । ವಿಹಿತಮ್ ಆಚಮನಾರ್ಘ್ಯ ಪೂಜೆ ನೈವೇದ್ಯ ॥ ಗುಹೆಯೊಳಗಣದ ಹೊರಗಣದ ಕೂಡಿಸುವುಪಾಯ । ಸಹಭಾವವದಕೆ ಸರಿ - ಮಂಕುತಿಮ್ಮ ॥ ೪೯೨ ॥
bahir antar aikyavanu nenapigAgisalendu । vihitam Achamana arghya pUje naivedya ॥ guheyoLagaNada horagaNada kUDisuva upAya । sahabhAvavu adke sari - Mankutimma ॥ 492 ॥
ಹೊರ ಮತ್ತು ಒಳಗಿನ ಚೇತನವು ಒಂದೇ ಎಂದು ನಮಗೆ ನೆನಪು ಮಾಡಿಕೊಡಲು ವಿಧಿಸಲ್ಪಟ್ಟ ಕ್ರಮವೇ, ಆಚಮನ ಅರ್ಘ್ಯ ಮತ್ತು ನೈವೇಧ್ಯಗಳಿಂದ ಮಾಡುವಂತಹ ಪೂಜೆ. ಈ ಪೂಜಾಕ್ರಮದಿಂದ ನಮ್ಮ ಒಳಗಿರುವ ಮತ್ತು ಹೊರಗಿರುವ ಚೇತನಗಳ ಏಕತೆ ಮತ್ತು ಐಕ್ಯತೆಯನ್ನು ಅರಿತು ಎರಡರಲ್ಲೂ ಸಮನ್ವಯವನ್ನು ತಾಳುವುದಕ್ಕೆ ಸರಿಯಾದ ಉಪಾಯವೇ ಪೂಜೆ ಎನ್ನುತ್ತಾರೆ ಈ ಮುಕ್ತಕದಲ್ಲಿ.
Unifying the inner spirit with the one outside is the goal of conscience. This is constantly reminded in rituals of aachamana, arghya, pujaa and naivedya. These are ideas to meet the inner expanse of the cave with the outer. When such co-ordination happens, it feels right. - Mankutimma
Video Coming Soon
Detailed video explanations by scholars and experts will be available soon.