Mankutimmana Kagga by D.V. Gundappa
ಅಂಬುಧಿಯ ಮಡಕೆಯಲಿ, ಹೊಂಬಿಸಿಲ ಕಿಟಿಕಿಯಲಿ । ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ॥ ಬಿಂಬದೊಳಗಮಿತ ಸತ್ತ್ವವ ಪಿಡಿದಿಡುವ ಭಕ್ತಿ- । ಯಿಂಬು ಕಿಂಚಿನ್ಮತಿಗೆ - ಮಂಕುತಿಮ್ಮ ॥ ೪೯೧ ॥
ambudhiya maDakeyali, hombisila kiTikiyali । tumbikoLLuva baDavana aishvaryadante ॥ bimbadoLage amita sattvava piDidiDuva bhaktiyu । imbu kinchinmatige - Mankutimma ॥ 491 ॥
ಸಾಗರವನ್ನು ಒಂದು ಪುಟ್ಟ ಮಡಕೆಯಲ್ಲಿ ಅಥವಾ ಸೂರ್ಯನ ಹೊಂಬಿಸಿಲನ್ನು ತನ್ನ ಪುಟ್ಟ ಗುಡಿಸಲಿನ ಕಿಟಕಿಯಲ್ಲಿ ತುಂಬಿಕೊಳ್ಳುವ ಪ್ರಯತ್ನಪಡುವ ಬಡವನಂತೆ ಮಹತ್ತಾದ ಪರತತ್ವವನ್ನು ಒಂದು ಪುಟ್ಟ ಮೂರ್ತಿಯಲ್ಲಿ ಕಾಣುವುದೇ ಭಕ್ತಿ ಎಂದು ಮಹತ್ತಾದ ವಿಷಯವನ್ನು ಅರುಹಿದ್ದಾರೆ ಮಾನ್ಯ ಗುಂಡಪ್ಪನವರು.
Trying to fill the water of the ocean in a pot, to see sunlight through the window is akin to a poor man amassing wealth. Our attempt at condensing the infinite definition of God into a small idol (reflection) is very similar. It only give solace to our simple minds. - Mankutimma
Video Coming Soon
Detailed video explanations by scholars and experts will be available soon.