Back to List

Kagga 490 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಬಹಿರದ್ಭುತವ ಮನುಜನಂತರದ್ಭುತವರಿತು । ಗ್ರಹಿಸುವಂತಾಗಿಸಲು ಪೂರ್ವಾನುಭವಿಗಳ್ ॥ ಬಹುಪರಿಯುಪಾಯಗಳ ನಿರವಿಸಿಹರದಕೇಕೆ । ಗಹಗಹಿಸುವೆಯೊ, ಮರುಳೆ? - ಮಂಕುತಿಮ್ಮ ॥ ೪೯೦ ॥

bahir adbhutava manujana antar adbhutavu aritu । grahisuvantAgisalu pUrvAnubhavigaL ॥ bahupari upAyagaLa niravisiharu adakEke । gahagahisuveyo, maruLe - Mankutimma ॥ 490 ॥

Meaning in Kannada

ನಮ್ಮ ಪೂರ್ವಜರು ತಮ್ಮ ಅನುಭವದಿಂದ, ಸೃಷ್ಟಿಯಲ್ಲಿ ನಮಗೆ ಹೊರಗೆ ಕಾಣುವ ಅದ್ಭುತಗಳನ್ನು ಅಂತರಂಗದಲ್ಲಿ ಅರಿತುಕೊಳ್ಳಲು ಹಲವಾರು ವಿಧಾನಗಳನ್ನು ಕಂಡುಕೊಂಡಿದ್ದಾರೆ. ಅದನ್ನು ಅರಿಯುವ ಮುನ್ನ ಅಥವಾ ಅದನ್ನು ಅರಿತುಕೊಳ್ಳುವ ಪ್ರಯತ್ನವನ್ನೇ ಮಾಡದೆ ಅದನ್ನು ಕಂಡು ಕುಹಕವಾಡುವಂತೆ ಗಹಗಹಿಸಿ ಏಕೆ ನಗುತ್ತೀಯೆ,ಹುಚ್ಚಾ ಎಂದು ಸತ್ಯವರಿಯದೆ ಒಂದು ವಿಷಯದ ಬಗ್ಗೆ ಕುಹಕವಾಡುವ ಮನಗಳನ್ನು ಕೇಳುತ್ತಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

There is wonder in the external creation. There is another wonder inside of every mind. To make the inner wonder grasp the outer wonder is possible only through experience. Those who have already experienced the wonders have devised ways to help us also to do so. Oh! Fool, why do you laugh at those methods? - Mankutimma

Themes

LifeNatureSociety

Video Section

Video Coming Soon

Detailed video explanations by scholars and experts will be available soon.