Mankutimmana Kagga by D.V. Gundappa
ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ । ಎತ್ತಲೋ ಸಖನೊರ್ವನಿಹನೆಂದು ನಂಬಿ ॥ ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು । ಭಕ್ತಿಯಂತೆಯೆ ನಮದು - ಮಂಕುತಿಮ್ಮ ॥ ೪೮೪ ॥
kattaleyoLu EnanO kanDu bedarida nAyi । ettalO sakhanorvanu ihanendu nambi ॥ kattetti mOLiDuta bogaLi hArADuvudu । bhakti anteye namadu - Mankutimma ॥ 484 ॥
ಕತ್ತಲಲ್ಲಿ ಭ್ರಮಿಸಿ ಏನನ್ನೋ ಕಂಡಂತಾಗಿ ಹೆದರಿದ ನಾಯಿ, ತನ್ನನ್ನು ಕಾಯುವ ಅಥವಾ ಕಾಪಾಡುವ ಯಾರೋ ಒಬ್ಬ ಸ್ನೇಹಿತನಿರುವನೆಂದು, ಎಲ್ಲಿರುವನೆಂದು ಅರಿಯದಿದ್ದರೂ, ಕತ್ತೆತ್ತಿ ಮೋಳಿಡುತ, ಬೊಗುಳಿ, ಹಾರಾಡಿ ಪರದಾಡುವುದು. ನಮ್ಮ ಭಕ್ತಿಯೂ ಸಹ ಇದೆ ರೀತಿಯದೆಂದು ಹೇಳುತ್ತಾರೆ ನಮ್ಮ ಗುಂಡಪ್ಪನವರು.
Dogs have a habit of barking loudly in the middle of night for no reason. They seem to see something moving in the dark of night. In the hope that a friend can hear, they lift their head and start howling. Out devotion towards God is much the same. - Mankutimma
Video Coming Soon
Detailed video explanations by scholars and experts will be available soon.