Mankutimmana Kagga by D.V. Gundappa
ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ । ನಂಬಿಯುಂ ನಂಬದಿರುವಿಬ್ಬಂದಿ ನೀನು ॥ ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು । ಸಿಂಬಳದಿ ನೊಣ ನೀನು - ಮಂಕುತಿಮ್ಮ ॥ ೪೮೫ ॥
nambadirdanu tande, nambidanu prahlAda । nambiyum nambadiruva ibbandi nInu ॥ kambadino bimbadino mOkShavu avaringAytu । simbaLadi nONa nInu - Mankutimma ॥ 485 ॥
ಪ್ರಹ್ಲಾದನ ತಂದೆ ಹಿರಣ್ಯಕಶಿಪು ‘ಹರಿ’ಯನ್ನು ನಂಬಲಿಲ್ಲ,ದ್ವೇಷಿಸಿದ ಮತ್ತು ತಾನೇ ದೇವರೆಂದ. ಅವನ ಮಗ ಪ್ರಹ್ಲಾದ ‘ಹರಿ’ ಸರ್ವೋತ್ತಮನೆಂದ. ತಂದೆಯ ದ್ವೇಷ ಮತ್ತು ಮಗನ ಭಕ್ತಿ ಅಥವಾ ನಂಬಿಕೆ ಸಂಪೂರ್ಣವಾಗಿತ್ತು. ಹಾಗಾಗಿ ನಂಬದ ತಂದೆಯನ್ನು ಕಂಬದಿಂದ ಒದಗಿ ಮತ್ತು ಮಗನಿಗೆ ದರ್ಶನ ಭಾಗ್ಯದಿಂದ ಮುಕ್ತಿಯನ್ನು ಪ್ರಸಾದಿಸಿದ. ಆದರೆ ನಾವೋ ನಂಬಿಯೂ ನಂಬದಂತೆ ‘ಎಡಬಿಡಂಗಿ’ ಸ್ಥಿತಿಯಲ್ಲಿ, ಸಿಂಬಳದಲ್ಲಿ ಏನೋ ಸಿಗುವುದೆಂಬ ಆಸೆಯಿಂದ ಹೋಗಿ ಅದರೊಳಗ ಅಂಟಿಕೊಂಡು ಹೊರ ಬರಲಾರದ ನೊಣದಂತೆ ಇದ್ದೇವೆ ಎಂದು ನಮ್ಮ ಭಕ್ತಿಯ ಪರಿಯನ್ನು ಕುಹಕವಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Father (Hiranyakashipu) was a non-believer. But, Prahlada believed entirely. You are a confused person who think he believes, but not. They were both liberated either by true realization (Prahlada) or by the pillar (Hiranyakashipu, by Narasimha coming out of the pillar and killing him). But what about your state? You are like a fly fallen into filth (mucus). Can't rejoice it, can't escape it. - Mankutimma
Video Coming Soon
Detailed video explanations by scholars and experts will be available soon.