Mankutimmana Kagga by D.V. Gundappa
ಗಾಳಿಯನು ಗುದ್ದಿದರೆ ಮೈ ನೊಯ್ವುದೊಂದೆ ಫಲ । ಮೂಲಸತ್ತ್ವವ ಮರೆತ ಸಾಹಸಗಳಂತು ॥ ಮೇಳವಿಸೆ ಪೌರುಷಕೆ ದೈವಕೃಪೆಯಂದು ಫಲ । ತಾಳಿ ಬಾಳಾವರೆಗೆ - ಮಂಕುತಿಮ್ಮ ॥ ೪೮೩ ॥
gALiyanu guddidare mai noyvudu onde phala । mUla sattvava mareta sAhasagaLantu ॥ mELavise pauruShake daiva kRupeyandu phala । tALi bAL aavarege - Mankutimma ॥ 483 ॥
ಹಾಗೆ ನಮಗೆ ಗೊತ್ತಿಲ್ಲದ ಅಥವಾ ಅರಿವಿಲ್ಲದ ಸಂಗತಿಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು ಒಂದು ಭ್ರಮೆಯಿಂದ ಏನನ್ನೋ ಸಾಧಿಸಬೇಕೆಂದು ಹೊರಟಾಗ, ಕೇವಲ ಗಾಳಿಯಲ್ಲಿ ಗುದ್ದಾಡಿ ಮೈ ನೋಯಿಸಿಕೊಂಡಂತೆ, ವ್ಯರ್ಥ ಪ್ರಯತ್ನವಾಗುತ್ತದೆ. ಅಂತಹ ಕೆಲಸಗಳನ್ನು ಮಾಡುವಾಗ ನಮ್ಮನ್ನು ಕ್ರಿಯಾಶೀಲತೆಗೆ ಪ್ರೇರೇಪಿಸುವ ಆ ಪರಮ ಶಕ್ತಿಯನ್ನು ಅರಿಯದೆ ಮಾಡಿದ ಕೆಲಸಗಳವು. ಎಂದು ನಮ್ಮ ಪ್ರಯತ್ನಕ್ಕೆ ಆ ಪರಮಾತ್ಮನ ಕೃಪೆಯ ಜೊತೆಯಾಗುತ್ತದೆಯೋ ಅಂದು ನಾವು ಸಫಲರಾಗುತ್ತೇವೆ. ಅಲ್ಲಿಯ ತನಕ ತಾಳ್ಮೆಯಿಂದ ಬಾಳಬೇಕು ಎಂದು ಆದೇಶವನ್ನು ಮಾಡಿದ್ದಾರೆ ನಮಗೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
If you punch in air what is the use? It will only result in your pain. Similar is the result on any industry that forgets the basics (that you can not control the outcome by yourself). When the will of providence aligns with human effort, only then will man succeed. Until then, he has to exercise patience. - Mankutimma
Video Coming Soon
Detailed video explanations by scholars and experts will be available soon.