Mankutimmana Kagga by D.V. Gundappa
ಗುಹೆಯೆಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ । ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ॥ ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- । ರ್ವಹಿಸುವುದೆ ಜಾಣ್ಮೆಯಲ - ಮಂಕುತಿಮ್ಮ ॥ ೪೮೨ ॥
guheyeDake, guhe balake, naDuve male, kaNiveyali । viharipeya huli bAradendu nIm nacchi? ॥ rahasiyada bhUta piDiyada teradi baduka । nirvahisuvude jANmeyala - Mankutimma ॥ 482 ॥
ಎಡಕ್ಕೆ ಒಂದು ಗುಹೆ ಮತ್ತು ಬಲಕ್ಕೆ ಒಂದು ಗುಹೆ. ಇವೆರಡರ ನಡುವೆ ಒಂದು ಬೆಟ್ಟ. ಇವೆರಡರ ನಡುವೆ ಕಣಿವೆಯೂ ಇದ್ದು ಅಲ್ಲೆಲ್ಲ ಓಡಾಡುವಾಗ ‘ಹುಲಿಯೋ, ಸಿಂಹವೋ’ ಬರುವ ಸಾಧ್ಯತೆಗಳಿದ್ದರೂ ‘ ಛೆ! ಅವೆಲ್ಲ ಇಲ್ಲಿ ಬರುವುದಿಲ್ಲ ಎಂಬ ನಂಬಿಕೆಯಿಂದ ನೀ ಇದ್ದೀಯೇನು’? ನಿನಗೆ ಗೊತ್ತಿಲ್ಲದ ರಹಸ್ಯದ ಭೂತ ನಿನ್ನ ಮೇಲೆ ಬಂದು ಎರಗಬಹುದು. ಹಾಗಾಗಿ ಅದು ಬಂದು ನಿನ್ನನ್ನು ಹಿಡಿಯದಂತೆ ಜಾಣ್ಮೆಯಿಂದ ಬದುಕನ್ನು ನಡೆಸಬೇಕು ಎಂದು ವಾಸ್ತವ ಮತ್ತು ನಮ್ಮ ನಂಬಿಕೆಗಳ ಮೇಲೆ ನಡೆಯುವ ನಮ್ಮ ಜೀವನಕ್ಕೆ ಒಂದು ಆದೇಶವನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Cave on the left, cave on the right, mountain straight ahead. Will you trust that there is no tiger prowling around and walk freely in the valley? No. You will be careful. Like wise, in life we must always be cautious of being caught by the secret entity (providence). A wise man would do that. - Mankutimma
Video Coming Soon
Detailed video explanations by scholars and experts will be available soon.