Mankutimmana Kagga by D.V. Gundappa
ನಿಶಿ ಹಿಂದೆ, ನಿಶಿ ಮುಂದೆ, ನಡುವೆ ಮಿಸುಕಾಟ ಬಾಳ್ । ನಿಶಿ ಕೆಲವರಿಗೆ ಸೊನ್ನೆ , ಕೆಲವರಿಗೆ ಗುಟ್ಟು ॥ ಮಸಕಿನಲಿ ಭೂತವೊಂದಿಹುದು ದಿಟವಾದೊಡದ- । ರುಸಿರು ಸೋಕದೆ ನಿನ್ನ? - ಮಂಕುತಿಮ್ಮ ॥ ೪೮೧ ॥
nishi hinde, nishi munde, naduve misukATa bAL। nishi kelavarige sonne, kelavarige guTTu ॥ masakinali bhUtavondihudu diTavAdoDe । adara usiru sOkade ninna? - Mankutimma ॥ 481 ॥
ನಮ್ಮ ಈ ಜನ್ಮದ ಹಿಂದೆ ಏನಿತ್ತೋ ಮತ್ತು ಈ ಜನ್ಮದ ನಂತರ ಏನೋ ನಮಗೆ ಅರಿವಿಲ್ಲ. ಇವೆರಡರ ನಡುವೆ ನಮ್ಮ ಮಿಸುಕಾಟ, ಓಡಾಟ, ಪರದಾಟಗಳು. ಕೆಲವರಿಗೆ ಹಿಂದೆ ಏನೋ ಇತ್ತು ಮತ್ತು ಮುಂದೆಯೂ ಏನೋ ಇದೆ ಎಂದು ನಂಬಿಕೆ. ಮತ್ತೆ ಕೆಲವರಿಗೆ ಏನೂ ಇಲ್ಲ ಮತ್ತೆ ಕೆಲವರಿಗೆ ಅದೊಂದು ರಹಸ್ಯ ಎಂದು ನಂಬಿಕೆ.ಇಲ್ಲದ್ದು ನಮ್ಮ ಮೇಲೆ ಪ್ರಭಾವ ಬೀರಲು ಸಾಧ್ಯವಿಲ್ಲ. ಆದರೆ ಇದೆ ಎಂಬ ನಂಬಿಕೆ ಬಂದರೆ ಹಾಗೆ ಇರುವುದು ತನ್ನ ಪ್ರಭಾವವನ್ನು ನಮ್ಮ ಮೇಲೆ ಬೀರದೆ ಇರುತ್ತದೆಯೇ ಎಂದು ಜನ್ಮ ಜನ್ಮಾಂತರದ ವಿಷಯವನ್ನು ಪ್ರಸ್ತಾಪ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
Darkness behind, darkness ahead and chaos in between - this is life. Some think this darkness is void. Some others think it is a mystery. If we think that there is a some being in the darkness, then will its breath not touch you ever? - Mankutimma
Video Coming Soon
Detailed video explanations by scholars and experts will be available soon.