Back to List

Kagga 478 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು । ಜಗಿದ ಮುಳ್ಳಿರಿತಗಳ ಸೈರಿಸೆ ಗುಲಾಬಿ ॥ ನಗುವುದೊಂದರೆನಿಮಿಷ ನಗಲು ಬಾಳ್ಮುಗಿಯುವುದು । ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ ॥ ೪೭೮ ॥

agedu gobbaravikki nIreredu tOTiganu । jagida muLLa iritagaLa sairise gulAbi ॥ naguvudu ondarenimiSha nagalu bAL mugiyuvudu । muguLu duDitake taNisu - Mankutimma ॥ 478 ॥

Meaning in Kannada

ಆ ಗುಲಾಬಿ ತೋಟದ ಮಾಲಿ, ನೆಲ ಅಗೆದು ಸಸಿಯ ನೆಟ್ಟು, ಅದಕ್ಕೆ ಗೊಬ್ಬರವ ಕೊಟ್ಟು ನೀರೆರೆದು, ಸೈರಣೆಯಿಂದ ಆ ಗಿಡದ ಮುಳ್ಳುಗಳಿಂದ ಚುಚ್ಚಿಸಿಕೊಂಡು, ಪ್ರೀತಿಯಿಂದ ಆ ಗಿಡವನ್ನು ಬೆಳೆಸಿದರೆ ಒಂದು ದಿನ ಹೂ ಬಿಟ್ಟು, ಅಲ್ಪಕಾಲವಾದರೂ ಜಗಕೆ ಸಂತಸವನ್ನು ಕೊಡುತ್ತಾ ನಲಿದಾಗ, ಮಾಲಿಯ ಅಷ್ಟೂ ದುಡಿತಕ್ಕೂ ಒಂದು ಸಾರ್ಥಕ್ಯದ ಭಾವ ಮೂಡುತ್ತದೆ, ಎಂದು ಜಗತ್ತಿನಲ್ಲಿ ‘ಆನಂದ’ವನ್ನು ಅನುಭವಿಸುವ ಪರಿಯ ಮತ್ತೊಂದು ಕೋನವನ್ನು ನಮಗೆ ವಿಶಧೀಕರಿಸಿದ್ದಾರೆ ಮಾನ್ಯ ಗುಂಡಪ್ಪನವರು, ನಮಗೆ ಈ ಮುಕ್ತಕದಲ್ಲಿ.

Meaning & Interpretation

A gardener will dig, put manure, pour water and grow a rose plant. He will endure the pain caused by the piercing of the thorns. The rose bud smiles only for half a second. Its life ends after the smile. But that smile is worth all the effort. - Mankutimma

Themes

LifeDeathSufferingNature

Video Section

Video Coming Soon

Detailed video explanations by scholars and experts will be available soon.