Mankutimmana Kagga by D.V. Gundappa
ಸತ್ಯವೆಂಬುದದೇನು ಸೈನಿಕನ ಜೀವನದಿ? । ಕತ್ತಿಯವನಿಗೆ ಸತ್ಯವದರಿಂದೆ ಧರ್ಮ ॥ ಭುಕ್ತಿಸುಪ್ತಿಗಳ ವಿಭವಂಗಳವನಿಗೆ ಮಿಥ್ಯೆ । ಸಾರ್ಥಕತೆಯಿಂ ಸತ್ಯ - ಮಂಕುತಿಮ್ಮ ॥ ೪೭೯ ॥
satyavembudadEnu sainikana jIvanadi? । kattiyu avanige satyavu adarinda dharma ॥ bhukti supti vibhavangaLu avanige mithya । sArthakateyiM satya - Mankutimma ॥ 479 ॥
ಸೈನಿಕನ ಜೀವನದಲ್ಲಿ ಸತ್ಯವೆಂಬುದು ಏನು? ಅವನಿಗೆ ಕತ್ತಿಯೇ ಅವನಿಗೆ ಸತ್ಯ ಮತ್ತು ಅದರಿಂದಲೇ ಅವನು ತನ್ನ ಧರ್ಮವನ್ನು ನಿರ್ವಹಿಸುತ್ತಾನೆ. ಆ ಸತ್ಯದ ಬಲದಿಂದ ಅವನು ತನ್ನ ಧರ್ಮವನ್ನು ನಿರ್ವಹಿಸುವಾಗ ಅವನಿಗೆ ಅನ್ನಾಹಾರಗಳ,ಆರಾಮ ನಿದ್ರೆಗಳ, ಮತ್ತು ಸುಖ ಆನಂದಗಳ ಪರಿವೆಯಿರುವುದಿಲ್ಲ ಮತ್ತು ಅವುಗಳೆಲ್ಲಾ ಅವನಿಗೆ ಮಿಥ್ಯವಾಗಿ ಕಾಣುತ್ತದೆ. ಅವನು ಸತ್ಯದ ಬಲದಿಂದಲೇ ತನ್ನ ಧರ್ಮ ನಿರ್ವಹಣೆಯಿಂದ ಬದುಕಿನಲ್ಲಿ ಸಾರ್ಥಕತೆಯನ್ನು ಕಂಡುಕೊಂಡು ಜೀವನದ ಸತ್ಯವನ್ನು ಕಾಣುತ್ತಾನೆ ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.
What is the meaning of truth in the life of a soldier? The sword is the only truth he knows. All morality is derived from that. He has no belief in the simple pleasures of life - food, sleep and merry. People believe what gives them satisfaction as the ultimate truth. - Mankutimma
Video Coming Soon
Detailed video explanations by scholars and experts will be available soon.