Back to List

Kagga 477 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಹೂವ ತಳೆದ ಗುಲಾಬಿಯಿಂದ ಮನಕಹುದೇನು? । ನೋವೋ? ಸಂತಸವೊ? ನೋಡಾಮುಳ್ಳು ಬಾಳ್ಗೆ ॥ ಹೂವೆ ದಿವ್ಯಕಿರೀಟವದುವೆ ಕಾಲಕಟಾಕ್ಷ । ಜೀವನದ ತಿರುಳಷ್ಟೆ - ಮಂಕುತಿಮ್ಮ ॥ ೪೭೭ ॥

hUva taLida gulAbiyinda manakahudEnu? । nOvO? santasavo? nODu aa muLLu bALge ॥ hUve divya kirITavu aduve kAlakaTAkSha । jIvanada tiruLaShTe - Mankutimma ॥ 477 ॥

Meaning in Kannada

ಸುಂದರವಾದ ಹೂವನ್ನು ತಳೆದ ಗುಲಾಬಿ ಗಿಡದಿಂದ ನಾವು ಅರಿಯುವುದು ಅಥವಾ ಅನುಭವಿಸುವುದು, ನೋವೋ ನಲಿವೋ ಸಂತಸವೋ?. ನೋಡಿ, ಗಿಡದ ಮುಳ್ಳನ್ನು ಬಾಳಿಗೆ ಹೋಲಿಸಿಕೊಂಡರೆ, ಗಿಡದ ಶಿಖರದಲ್ಲಿ ತಳೆಯುವ ಆ ಸುಂದರ ಹೂವನ್ನು ನಾವು ನಡೆದು ಬಂದ ಕಾಲವು ನಮಗೆ ಜೀವನದ ಅಂತ್ಯದಲ್ಲಿ ಕರುಣಿಸುವ ಶಾಂತಿ ನೆಮ್ಮದಿ ಅಥವಾ ಸುಖಕ್ಕೆ ಹೋಲಿಸಿಕೊಳ್ಳಬೇಕು. ಜೀವನದ ತಿರುಳು ಅಥವಾ ಸಾರವು ಅಷ್ಟೇ ಎಂದು ಜೀವನಾನುಭವವನ್ನು ನಾವು ಹೇಗೆ ಪರಿಗಣಿಸಬೇಕು ಎಂದು ಸೂಚಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

What do you feel when you see a rose blooming in a plant? Do you feel pain? or pleasure? See the thorn also. Our life secret is also as simple as that. The rose the goal of life. The thorns are the only ways to attain it. - Mankutimma

Themes

LifeSuffering

Video Section

Video Coming Soon

Detailed video explanations by scholars and experts will be available soon.