Back to List

Kagga 476 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಜೀವನೋದ್ಯಮವೆಲ್ಲ ತೋಟದುದ್ಯೋಗವೆನು । ಭಾವಬುದ್ಧಿಗಳ ಕೃಷಿಯಿಂದೊಗೆದ ಫಲದಿಂ ॥ ತೀವುತಿರೆ ನಗೆ ಹೊಳಪು ಮೊಗಮೊಗದೊಳಂ ಜಗದಿ । ಸೇವೆಯದು ಬೊಮ್ಮಂಗೆ - ಮಂಕುತಿಮ್ಮ ॥ ೪೭೬ ॥

jIvanOdyamavella tOTada udyOgavenu । bhAvabuddhigaLa kRuShiyinda ogeda phaladim ॥ tIvutire nage hoLapu mogamogadoLam jagadi । sEveyadu bommange - Mankutimma ॥ 476 ॥

Meaning in Kannada

ಸಕಲ ಚರಾಚರಗಳ ಜಗತ್ತಿನ ಜೀವನವು ಆ ಪರಮಾತ್ಮನ ತೋಟ ಅಥವಾ ಉದ್ಯಾನವನ. ನಾವೆಲ್ಲಾ ಅವನು ಬೆಳೆಸಿದ ನಡೆದಾಡುವ ಗಿಡಗಳು. ನಮ್ಮ ಭಾವಗಳ ಮಂಥನದಿಂದ ಈ ಉದ್ಯಾನವನ್ನು ಕೃಷಿಗೈದಾಗ, ‘ಆನಂದ’ದ ರೂಪದಲ್ಲಿ ಸುಫಲ ಲಭ್ಯವಾಗಿ ಪ್ರತೀ ಜೀವಿಯ ಮುಖದಲ್ಲೂ ನಗೆ ಮತ್ತು ಸಂತೋಷದ ಹೊಳಪು ತುಂಬಿ ತುಳುಕ್ಕುತ್ತಿದ್ದರೆ, ಆ ಕೃಷಿಯೇ ನಾವೆಲ್ಲಾ ಮಾಡುವ ‘ಪರಮಾತ್ಮನ ಸೇವೆ’ ಯೆಂದಾಗುತ್ತದೆ ಎಂದು ಪರಮಾತ್ಮನ ಸೇವೆಯ ಮತ್ತೊಂದು ವಿಧಾನವನ್ನು ನಮ್ಮ ಮುಂದಿಟ್ಟಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

Meaning & Interpretation

Consider all hard work we put in this world same as tending to a garden. If the fruits of our cultivation of feelings and emotions brings sparkle of smiles on many faces, then we can think we served God well. - Mankutimma

Themes

DevotionLifeDeathLoveDuty

Video Section

Video Coming Soon

Detailed video explanations by scholars and experts will be available soon.