Mankutimmana Kagga by D.V. Gundappa
ಗೌರವಿಸು ಜೀವನವ, ಗೌರವಿಸು ಚೇತನವ । ಆರದೋ ಜಗವೆಂದು ಭೇದವೆಣಿಸದಿರು ॥ ಹೋರುವುದೆ ಜೀವನಸಮೃದ್ಧಿಗೋಸುಗ ನಿನಗೆ । ದಾರಿಯಾತ್ಮೊನ್ನತಿಗೆ - ಮಂಕುತಿಮ್ಮ ॥ ೪೭೫ ॥
gouravisu jIvanava, gouravisu chEtanava । Arado jagavendu bhedaveNisadiru ॥ hOruvude jIvana samRuddhigOsuga ninage । dAri AtmOnnatige - Mankutimma ॥ 475 ॥
ನಿನ್ನ ಜೀವನವನ್ನು ಗೌರವಿಸು, ಆ ಜೀವನಕ್ಕೆ ಮೂಲವಾದ ಚೇತನವನ್ನು ಗೌರವಿಸು. ಇದು ಯಾರದೋ ಜಗತ್ತು, ನಾನೇನೂ ಇಲ್ಲಿ ಶಾಶ್ವತವಾಗಿ ಇರುವುದಿಲ್ಲವಲ್ಲ ಎಂದು ಬದುಕನ್ನು ಗೌಣವೆಂದೆಣಿಸಬೇಡ. ಈ ಬದುಕಿನಲ್ಲಿ ನಾವು ಹೋರಾಡುವುದೇ ಸಮೃದ್ಧಿಗೋಸ್ಕರ. ಈ ಹೋರಾಟ ನಮಗೆ ಆತ್ಮೋನ್ನತಿಗೆ ದಾರಿಯಾಗಿದೆ ಎಂದು ಬಹಳ ಗಹನವಾದ ತತ್ವವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ ಅರುಹಿದ್ದಾರೆ.
Respect life, respect the source of all energy. Don't be disinterested in this world assuming someone else is running it. Putting in hard work is the only path towards prosperity. It is also the path towards enrichment of your soul. - Mankutimma
Video Coming Soon
Detailed video explanations by scholars and experts will be available soon.