Back to List

Kagga 471 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮಂದಿರದ ಶಿಲ್ಪಿ ಯಂತ್ರಗಳ ಯೊಜಕ ರಾಜ್ಯ - । ಸಂಧಾನಿ ವಿಜ್ಞಾನಿಯುದ್ಯೊಗದಾನಿ ॥ ಮಂದಿಮುಂದಾಳು ಜನಬಾಂಧವ್ಯಪೋಷಕನು । ಸೌಂದರ್ಯಕರರಿವರು - ಮಂಕುತಿಮ್ಮ ॥ ೪೭೧ ॥

mandirada shilpi yantragaLa yojaka rAjya- । sandhAni vijnAniyu udyoga dAni ॥ mandi mundALu janabAndhavya pOShakanu । soundaryakararu ivaru - Mankutimma ॥ 471 ॥

Meaning in Kannada

ಮಂದಿರವನ್ನು ನಿರ್ಮಿಸುವ ಶಿಲ್ಪಿ, ಯಂತ್ರಗಳನ್ನು ಸೃಷ್ಟಿಸುವ ವಿಜ್ಞಾನಿ ಆ ಯಂತ್ರಗಳನ್ನು ಕೈಗಾರಿಕೆಗಾಗಿ ಉಪಯೋಗಿಸುವ ಉದ್ಯಮಿ, ಸಮಾಜದ ವ್ಯವಸ್ಥೆಗೆ ರಾಜ್ಯಬಾರ ಕ್ರಮವನ್ನು ಅನುಸಂಧಾನ ಮಾಡುವ ರಾಜಕಾರಣಿ, ಉದ್ಯಮಗಳನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ಕೊಡುವವ, ಜನರನ್ನು ಹುರಿದುಂಬಿಸಿ ಕಾರ್ಯೋನ್ಮುಖರನ್ನಾಗಿಸುವ ಜನನಾಯಕರು ಮತ್ತು ಜನರಲ್ಲಿ ಪರಸ್ಪರ ಬಾಂಧವ್ಯವನ್ನು ಹೆಚ್ಚಿಸುವವರು, ಇವರೆಲ್ಲರೂ ಈ ಜಗತ್ತಿನಲ್ಲಿ ಸೌಂದರ್ಯವನ್ನು ಉಂಟುಮಾಡುವವರು ಎಂದು ಉಲ್ಲೇಖಮಾಡಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

These people are all creators of beauty in their own ways - a sculptor at a temple, an engineer who builds machines, a diplomat, a scientist, an entrepreneur, a leader, a philanthropist who gets people together. - Mankutimma

Themes

Society

Video Section

Video Coming Soon

Detailed video explanations by scholars and experts will be available soon.