Mankutimmana Kagga by D.V. Gundappa
ಕವಿ ಚಿತ್ರಕೋವಿದನು ಪರತತ್ತ್ವಶೋಧಕನು । ವಿವಿಧ ವಾದನ ಗೀತ ನೃತ್ಯ ಕುಶಲಿಗಳು ॥ ನವನವತೆಯಂ ಮನಸಿಗೀವೆಲ್ಲ ಕಲೆಗಾರ- । ರವರಿಂದ ಸುಂದರತೆ - ಮಂಕುತಿಮ್ಮ ॥ ೪೭೨ ॥
kavi chitra kovidanu paratattva shOdhakanu । vividha vAdana gIta nRutya kushaligaLu ॥ navanavateyam manasige iiva ella kalegAraru । avarinda sundarate - Mankutimma ॥ 472 ॥
ಕವಿ, ಚಿತ್ರ ಕಲಾವಿದ, ಪರತತ್ವವನು ಶೋಧಿಸಿ ಸತ್ವ ಗ್ರಾಹಕ ಮತ್ತು ತತ್ವ ಪ್ರಚಾರಕನು, ವಿವಿಧ ವಾದ್ಯಗಳನ್ನು ನುಡಿಸುವ ಕಲಾವಿದರು, ಸಂಗೀತ, ನೃತ್ಯ ಮುಂತಾದ ಕಲೆಗಳಲ್ಲಿ ನಿಪುಣತೆಯನ್ನು ಪಡೆದ ಕುಶಲಿಗಳು, ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹೊಸ ಹೊಸ ಆವಿಷ್ಕಾರವನ್ನು ಮಾಡಿ, ಹೊಸವಿಚಾರಗಳನ್ನು ನಮಗೆ ನೀಡಿ ಆನಂದವನ್ನು ನೀಡುವರು, ಇವರ ಸೃಷ್ಟಿಯೂ ಸಹ ‘ಸುಂದರತೆ’ಯನ್ನು ಜಗತ್ತಿಗೆ ನೀಡುತ್ತದೆ ಎಂದು ಜಗತ್ತಿನಲ್ಲಿ ಹಲವಾರು ಜನ ತಮ್ಮ ಕಲ್ಪನೆ ಮತ್ತು ಕುಶಲತೆಯಿಂದ ಬದುಕಿನ ಸುಂದರತೆಗೆ ತಮ್ಮ ಕಾಣಿಕೆಯನ್ನು ನೀಡುತ್ತಾರೆ ಎನ್ನುವ ಭಾವವನ್ನು ಈ ಮುಕ್ತಕದಲ್ಲಿ ವ್ಯಕ್ತಪಡಿಸಿದ್ದಾರೆ ಮಾನ್ಯ ಗುಂಡಪ್ಪನವರು.
These people give freshness to our minds every day - a poet, a painter, a scientist/philosopher interested in the finding out the truth, people who are experts in playing instruments, singers, dancers and other artisans. Their acts enhance the experience of beauty every day. - Mankutimma
Video Coming Soon
Detailed video explanations by scholars and experts will be available soon.